
ಡಾ.ಗಣೇಶ್ ಕಾಮತ್ ನಿಧನ
Friday, April 11, 2025
ಲೋಕಬಂಧು ನ್ಯೂಸ್
ಉಡುಪಿ: ನಗರದ ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆ (ಮಿಷನ್ ಆಸ್ಪತ್ರೆ)ಯ ಹಿರಿಯ ವೈದ್ಯ, ಕಟಪಾಡಿ ನಿವಾಸಿ ಡಾ. ಗಣೇಶ್ ಕಾಮತ್ ಗುರುವಾರ ರಾತ್ರಿ ಹೃದಯಾಘತದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಮಿಷನ್ ಆಸ್ಪತ್ರೆಯಲ್ಲಿ ಯಾವುದೇ ರಜೆ ಪಡೆಯದೆ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡುತ್ತ ಬಂದಿರುವ ಡಾ.ಕಾಮತ್ ಅಗಲಿಕೆ ಆಸ್ಪತ್ರೆಗೆ ತುಂಬಲಾರದ ನಷ್ಟ. ಗಣೇಶ್ ಕಾಮತ್ ನಮ್ಮ ಆಸ್ಪತ್ರೆಯ ಹಿರಿಯ ವೈದ್ಯಕೀಯ ಸಮಾಲೋಚಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಶೋಕ ವ್ಯಕ್ತಪಡಿಸಿದ್ದಾರೆ.