
ಸಂಭ್ರಮದ ಸೌರಯುಗಾದಿ ಆಚರಣೆ
Monday, April 14, 2025
ಲೋಕಬಂಧು ನ್ಯೂಸ್
ಮನೆಗಳಲ್ಲಿ ಹಾಗೂ ಕೆಲವು ದೇವಳಗಳಲ್ಲಿ ದೇವರೆದುರು ಬಿಸುಕಣಿ ಇರಿಸಿ ಕನ್ನಡಿಯನ್ನು ಮುಖ ಕಂಡು ದೇವರ ದರ್ಶನ ಪಡೆದರು. ಬಳಿಕ ಸವಿಯೂಟ ಸವಿದರು.
ಕೆಲವು ದೇವಳಗಳಲ್ಲಿ ಯುಗಾದಿ ಅಂಗವಾಗಿ ವಿಶೇಷ ಪೂಜೆ ಏರ್ಪಾಡಾಗಿತ್ತು.
ಉಡುಪಿಯಲ್ಲಿ
ಉಡುಪಿ ಕೃಷ್ಣಮಠದಲ್ಲಿ ಪರ್ಯಾಯ ಪುತ್ತಿಗೆ ಶ್ರೀಗಳ ನೇತೃತ್ವದಲ್ಲಿ ಸೌರಯುಗಾದಿ ಆಚರಿಸಲಾಗಿದ್ದು, ರಥಬೀದಿಯಲ್ಲಿ ಶ್ರೀಕೃಷ್ಣಮುಖ್ಯಪ್ರಾಣರ ಉತ್ಸವ ಮೂರ್ತಿಯನ್ನು ಚಿನ್ನದ ರಥದಲ್ಲಿರಿಸಿ ರಥಬೀದಿಯಲ್ಲಿ ಉತ್ಸವ ಮಾಡಲಾಯಿತು.
ಬಳಿಕ ಚಂದ್ರಶಾಲೆಯಲ್ಲಿ ನೂತನ ವಿಶ್ವಾವಸು ಸಂವತ್ಸರದ ಪಂಚಾಂಗ ಶ್ರವಣ, ವಿಶೇಷ ಪೂಜೆ ನಡೆಯಿತು.
ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಅದಮಾರು ಹಿರಿಯ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ಭಂಡಾರಕೇರಿ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.
ಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನಾಚಾರ್ಯ ಮೊದಲಾದವರಿದ್ದರು.