-->
ಸಂಭ್ರಮದ ಹನುಮ ಜಯಂತಿ ಆಚರಣೆ

ಸಂಭ್ರಮದ ಹನುಮ ಜಯಂತಿ ಆಚರಣೆ

ಲೋಕಬಂಧು ನ್ಯೂಸ್
ಉಡುಪಿ: ಚೈತ್ರ ಶುಕ್ಲ ಹುಣ್ಣಿಮೆ ಶನಿವಾರದಂದು ಹನುಮ ಜಯಂತಿಯನ್ನು ಸಾಂಪ್ರದಾಯಿಕ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಉಡುಪಿ ಕೃಷ್ಣಮಠದಲ್ಲಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ನೇತೃತ್ವದಲ್ಲಿ ಸಂಭ್ರಮದಿಂದ ನಡೆಸಲಾಯಿತು.
ಮಹೋತ್ಸವ ಅಂಗವಾಗಿ ಕೃಷ್ಣಮಠ ಹಾಗೂ ಮಠದೊಳಗಿನ ಮುಖ್ಯಪ್ರಾಣ ಹಾಗೂ ಭೋಜನಶಾಲೆ ಮುಖ್ಯಪ್ರಾಣ ಸನ್ನಿಧಿಯನ್ನು ವಿಶೇಷವಾಗಿ ಹೂಗಳಿಂದ ಅಲಂಕರಿಸಲಾಗಿತ್ತು.
ಪರ್ಯಾಯ ಪುತ್ತಿಗೆ ಯತಿದ್ವಯರ ನೇತೃತ್ವದಲ್ಲಿ ಭಕ್ತಾದಿಗಳ ಸಹಯೋಗದೊಂದಿಗೆ ವಾಯುಸ್ತುತಿ ಪುನಶ್ಚರಣೆ, ಅಭಿಷೇಕ ನಡೆಯಿತು. ಬಳಿಕ ಶ್ರೀಗಳಿಂದ ಅನುಗ್ರಹ ಸಂದೇಶ ನಡೆಯಿತು.
ಭಕ್ತರಿಗೆ ಹಾಲುಪಾಯಸದ ಸವಿಯೂಟ ನೀಡಲಾಗಿತ್ತು. ರಾತ್ರಿ ರಂಗಪೂಜೆ, ರಥೋತ್ಸವ ನಡೆಯಿತು.


ಪಲಿಮಾರು ಮೂಲ ಮಠದಲ್ಲಿ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹಾಗೂ ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರ ನೇತೃತ್ವದಲ್ಲಿ ಹನುಮ ಜಯಂತಿ ನಡೆಯಿತು.


ಜಿ.ಎಸ್.ಬಿ ಸಮಾಜದ ಮಲ್ಪೆ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ಹಾಗೂ ಹನುಮ ದೇವರ ಪ್ರತಿಷ್ಠಾ ರಜತ ಮಹೋತ್ಸವ ಹಾಗೂ ಹನುಮ ಜಯಂತಿ ವೈಭವದಿಂದ ನಡೆಯಿತು ದೇವರಿಗೆ ವಿಶೇಷ ಅಲಂಕಾರ, ಸೌಮ್ಯ ಕಿಣಿ ಕಲ್ಯಾಣಪುರ ಬಳಗದವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಭದ್ರಗಿರಿಯ ಶ್ರೀ ವೀರವಿಠ್ಠಲ ದೇವಸ್ಥಾನದ ಕೈಯಲ್ಲಿ ತಂಬೂರಿ ಮತ್ತೊಂದು ಕೈಯಲ್ಲಿ ಚಿಟಿಕೆ ಹಿಡಿದಿರುವ ಅಪರೂಪದ ಶ್ರೀ ಹನುಮಂತ ದೇವರ ವಿಗ್ರಹಕ್ಕೆ ನೂತನ ರಜತ ಕವಚ ಸಮರ್ಪಣೆ ನಡೆಯಿತು.

Ads on article

Advertise in articles 1

advertising articles 2

Advertise under the article