-->
ಕೊಡವೂರ್ದ ಜುಮಾದಿ ಕೋಲ ಲೆಪ್ಪೋಲೆ ಬಿಡುಗಡೆ

ಕೊಡವೂರ್ದ ಜುಮಾದಿ ಕೋಲ ಲೆಪ್ಪೋಲೆ ಬಿಡುಗಡೆ

ಲೋಕಬಂಧು ನ್ಯೂಸ್
ಉಡುಪಿ: ಕೊಡವೂರ್ದ ಜುಮಾದಿ ಕೋಲದ ಲೆಪ್ಪೋಲೆ (ಆಮಂತ್ರಣ ಪತ್ರಿಕೆ) ಬಿಡುಗಡೆ ಕಾರ್ಯಕ್ರಮ ಶುಕ್ರವಾರ ಕೊಡವೂರು ಶ್ರೀ ಶಂಕರ ನಾರಾಯಣ ದೇವಾಲಯದ ವಸಂತ ಮಂಟಪದಲ್ಲಿ ಪ್ರಾರ್ಥನೆಯೊಂದಿಗೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಪಂಚ ಧೂಮಾವತಿ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸುಭಾಷ್ ಮೆಂಡನ್  ವಹಿಸಿದ್ದರು.


ಮುಖ್ಯ ಅತಿಥಿಯಾಗಿ ಭೂ ಸಮರ್ಪಣಾ ಸಮಿತಿ ಗೌರವಾಧ್ಯಕ್ಷ ಸಾಧು ಸಾಲಿಯಾನ್, ಭೂ ಸಮರ್ಪಣಾ ಸಮಿತಿ ಗೌರವ ಸಲಹೆಗಾರ ಕಾಪುಬೂಡು ಅನಿಲ್ ಬಲ್ಲಾಳ್, ಶ್ರೀ ಪಂಚ ಧೂಮಾವತಿ ದೈವಸ್ಥಾನದ ಆಡಳಿತ ಮಂಡಳಿ ಗೌರವಾಧ್ಯಕ್ಷ ಅಣ್ಣಪ್ಪ ಶೆಟ್ಟಿ, ಪಡ್ಲನೆರ್ಗಿ ನಾಗರಿಕ ಸಮಿತಿ ಅಧ್ಯಕ್ಷ ಶೇಖರ್ ಪುತ್ರನ್, ಶ್ರೀ ಶಂಕರ ನಾರಾಯಣ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ವಾದಿರಾಜ ಸಾಲಿಯನ್ ಮತ್ತು ಶೀಲ ಕೃಷ್ಣ ದೇವಾಡಿಗ, ಕೊಡವೂರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಕೊಡವೂರು, ಮತ್ಸೋದ್ಯಮಿ ಮಂಜುನಾಥ ಕೊಳ, ಶ್ರೀ ಪಂಚ ಧೂಮಾವತಿ ದೈವಸ್ಥಾನದ ಭೂ ಸಮರ್ಪಣಾ ಸಮ್ಮತಿ ಕಾರ್ಯಾಧ್ಯಕ್ಷ ಹಾಗೂ ಕೊಡವೂರು ವಾರ್ಡ್  ನಗರಸಭಾ ಸದಸ್ಯ ವಿಜಯ ಕೊಡವೂರು, ಭೂ ಸಮರ್ಪಣ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಭಾತ್ ಕೊಡವೂರು, ಶ್ರೀ ವೀರ ಮಾರುತಿ ಭಜನಾ ಮಂಡಳಿ ಮಹಿಳಾ ಸಮಿತಿ ಮಾಜಿ ಅಧ್ಯಕ್ಷೆ ಹೇಮಲತಾ ರಮೇಶ್ ಸುವರ್ಣ, ಮಾತೃಶ್ರೀ ಮಹಿಳಾ ಮಂಡಲ ಗರ್ಡೇ ಅಧ್ಯಕ್ಷೆ ಪ್ರೇಮ ಉಪಸ್ಥಿತರಿದ್ದರು.


ಭೂ ಸಮರ್ಪಣಾ  ಸಮಿತಿ ಉಪಾಧ್ಯಕ್ಷ ಸಚಿನ್ ಸ್ವಾಗತಿಸಿ, ಸಮಿತಿಯ ಕಾರ್ಯದರ್ಶಿ ಚಂದ್ರಕಾಂತ್ ಕೊಡವೂರು ವಂದಿಸಿದರು.

Ads on article

Advertise in articles 1

advertising articles 2

Advertise under the article