
ತುಳು ಕಾಲಮಾನ ಕ್ಯಾಲೆಂಡರ್ ಬಿಡುಗಡೆ
Wednesday, April 16, 2025
ಲೋಕಬಂಧು ನ್ಯೂಸ್
ಉಡುಪಿ: ಜೈ ತುಳುನಾಡು ಸಂಸ್ಥೆಯ ಉಡುಪಿ ಘಟಕ ವತಿಯಿಂದ ತುಳು ಕಾಲಮಾನ ಪ್ರಕಾರ ತಯಾರಿಸಿರುವ ಕ್ಯಾಲೆಂಡರ್ (ಕಾಲಕೋಂದೆ) ಸೋಮವಾರ ಪತ್ರಿಕಾ ಭವನದಲ್ಲಿ ಸಂಸ್ಥೆಯ ಪ್ರಮುಖರು ಅನಾವರಣಗೊಳಿಸಿದರು.
ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಡಾ.ಆಕಾಶ್ ರಾಜ್ ಜೈನ್, ತುಳು ಕ್ಯಾಲೆಂಡರ್ ಏಪ್ರಿಲ್ ತಿಂಗಳ ಮಧ್ಯದಲ್ಲಿ ಆರಂಭವಾಗುತ್ತದೆ. ಸಂಕ್ರಾಂತಿಯ ಮರುದಿನ ತಿಂಗಳಿನ ಆರಂಭದ ದಿನವಾಗಿದ್ದು, ಮೊದಲ ದಿನವನ್ನು ಸಿಂಗೊಡೆ ಎಂದು ಕರೆಯಲಾಗುತ್ತದೆ. ಪಗ್ಗು, ಬೇಸ, ಕಾರ್ತೆಲ್, ಆಟಿ, ಸೋಣ, ನಿರ್ನಾಲ್ (ಕನ್ಯಾ), ಬೊಂತೆಲ್, ಜಾರ್ದೆ, ಪೆರಾರ್ದೆ, ಪುಯಿಂತೆಲ್ (ಪೊನ್ನಿ), ಮಾಯಿ, ಸುಗ್ಗಿ ಇವು ತುಳು ತಿಂಗಳುಗಳಾಗಿವೆ.
ಯುವ ಪೀಳಿಗೆಗೆ ಹಾಗೂ ತೌಳವ ಸಮಾಜಕ್ಕೆ ತಮ್ಮ ಸಂಸ್ಕಾರದ ಅರಿವು ಹಾಗೂ ತುಳು ತಿಂಗಳಿನ ಮೂಲಕ ತಮ್ಮ ಸಂಸ್ಕೃತಿಯ ಒಲವನ್ನು ಬೆಳೆಸಲು ಪೂರಕವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸುಶೀಲಾ ಜಯಕರ್, ಪ್ರಶಾಂತ್ ಕುಂಜೂರು, ಶರತ್ ಕುಮಾರ್ ಕೊಡವೂರು ಉಪಸ್ಥಿತರಿದ್ದರು.