
ಪಹಲ್ಲಾಮ್ ದಾಳಿ: ಮೃತ ಕುಟುಂಬಗಳಿಗೆ ಶೃಂಗೇರಿ ಮಠದಿಂದ ತಲಾ 2 ಲಕ್ಷ ನೆರವು
Thursday, May 1, 2025
ಲೋಕಬಂಧು ನ್ಯೂಸ್
ಶೃಂಗೇರಿ: ಜಮ್ಮು-ಕಾಶ್ಮೀರದ ಪಹಲ್ಲಾಮ್‌ನಲ್ಲಿ ಈಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟಿರುವ 26 ಕುಟುಂಬಗಳಿಗೆ ಶೃಂಗೇರಿ ಶ್ರೀ ಶಾರದಾ ಪೀಠದಿಂದ ತಲಾ ಎರಡು ಲಕ್ಷ ಪರಿಹಾರವನ್ನು ಜಗದ್ಗುರು ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳು ಘೋಷಣೆ ಮಾಡಿದ್ದಾರೆ.
ಅಕ್ಷಯ ತೃತೀಯಾ ಸಂದರ್ಭದಲ್ಲಿ ಉಗ್ರರ ದಾಳಿಗೆ ತಮ್ಮ ಮನೆಯವರನ್ನು ಕಳೆದುಕೊಂಡ ನೋವಿನಲ್ಲಿ 26 ಕುಟುಂಬಸ್ಥರು ಇದ್ದಾರೆ. ಹಿಂದೂಗಳ ಜೊತೆ ಹಿಂದುಗಳೇ ನಿಲ್ಲಬೇಕು. ಹೀಗಾಗಿ ಶೃಂಗೇರಿ ಶಾರದಾ ಪೀಠದ ವತಿಯಿಂದ ಪ್ರತೀ ಕುಟುಂಬಕ್ಕೆ ಎರಡು ಲಕ್ಷ ರೂ. ನೆರವನ್ನು ಪ್ರಸಾದ ರೂಪದಲ್ಲಿ ನೀಡುತ್ತಿದ್ದೇವೆ. ಈ ಸಂದರ್ಭದಲ್ಲಿ ದುಃಖದಲ್ಲಿರುವ ಕುಟುಂಬದಲ್ಲಿ ಸಂತೋಷ, ಶ್ರೇಯಸ್ಸು ವೃದ್ಧಿಸಲಿ ಎಂದು ವಿಧುಶೇಖರಭಾರತೀ ಮಹಾಸ್ವಾಮಿಗಳು ಆಶಿಸಿದ್ದಾರೆ.