
ಎಸ್ಎಸ್ಎಲ್. ಸಿ ಪರೀಕ್ಷೆ: ಉಡುಪಿ ಜಿಲ್ಲ್ಲೆಗೆ 89.96 ಶೇ. ಫಲಿತಾಂಶ
Friday, May 2, 2025
ಲೋಕಬಂಧು ನ್ಯೂಸ್
ಉಡುಪಿ: ಕಳೆದ ಮಾರ್ಚ್ ನಲ್ಲಿ ನಡೆದ ಎಸ್ಎಸ್ಎಲ್.ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಉಡುಪಿ ಜಿಲ್ಲೆ 89.96 ಶೇ. ಫಲಿತಾಂಶ ದಾಖಲಿಸುವ ಮೂಲಕ ರಾಜ್ಯದಲ್ಲಿ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದೆ. ದ.ಕ. ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಜಿಲ್ಲೆಯಲ್ಲಿ ಪರೀಕ್ಷೆ ಬರೆದ ಒಟ್ಟು 13,579 ಮಂದಿ ವಿದ್ಯಾರ್ಥಿಗಳ ಪೈಕಿ 12,215 ಮಂದಿ ತೇರ್ಗಡೆಯಾಗಿದ್ದಾರೆ. ಅವರಲ್ಲಿ 5,989 ಹುಡುಗರು ಮತ್ತು 6,226 ಹುಡುಗಿಯರು. ಆ ಪೈಕಿ ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆಯ ಸ್ವಸ್ತಿ ಕಾಮತ್ 623 ಅಂಕ ಗಳಿಸಿದ್ದಾರೆ.
ಕಾರ್ಕಳ ತಾಲೂಕು ಗರಿಷ್ಠ ಫಲಿತಾಂಶ ದಾಖಲಿಸಿದ್ದು 92.4 ಶೇ. ಫಲಿತಾಂಶ ಬಂದಿದೆ. ಬೈಂದೂರು ತಾಲೂಕಿಗೆ ಕನಿಷ್ಟ ಫಲಿತಾಂಶ ಲಭಿಸಿದ್ದು 87.23 ಶೇ. ಫಲಿತಾಂಶ ಬಂದಿದೆ.
ಕನ್ನಡ ಮಾಧ್ಯಮದ 4,696 ವಿದ್ಯಾರ್ಥಿಗಳು ಹಾಗೂ ಆಂಗ್ಲ ಮಾಧ್ಯಮದ 7,519 ಮಂದಿ ತೇರ್ಗಡೆಯಾಗಿದ್ದಾರೆ. ಗ್ರಾಮೀಣ ಭಾಗದ 9,680 ಹಾಗೂ ನಗರ ಪ್ರದೇಶದ 2,535 ವಿದ್ಯಾರ್ಥಿಗಳು ತೇರ್ಗಡೆಯಾಗಿ ಅನುಕ್ರಮವಾಗಿ 90.29 ಶೇ. ಹಾಗೂ 88.70 ಶೇ. ಫಲಿತಾಂಶ ದಾಖಲಿಸಿದ್ದಾರೆ.
15 ಸರ್ಕಾರಿ ಪ್ರೌಢಶಾಲೆಯ 5,572, 4 ಅನುದಾನಿತ ಶಾಲಾ 2,792 ಮತ್ತು 32 ಅನುದಾನ ರಹಿತ ಶಾಲೆಗಳ 4,264 ವಿದ್ಯಾರ್ಥಿಗಳು ಪಾಸಾಗಿದ್ದಾರೆ.