-->
ಮೇ 31:ಉಚಿತ ಮಧುಮೇಹ ಪಾದ ತಪಾಸಣೆ

ಮೇ 31:ಉಚಿತ ಮಧುಮೇಹ ಪಾದ ತಪಾಸಣೆ

ಲೋಕಬಂಧು ನ್ಯೂಸ್, ಉಡುಪಿ
ನಗರದ ಡಾ. ಟಿ.ಎಂ.ಎ. ಪೈ ಆಸ್ಪತ್ರೆಯಲ್ಲಿ ಮೇ 31ರಂದು ಬೆಳಿಗ್ಗೆ 9ರಿಂದ ಅಪರಾಹ್ನ 2ರ ವರೆಗೆ ಮಧುಮೇಹ ಪಾದ ತಪಾಸಣಾ ಶಿಬಿರ ನಡೆಯಲಿದೆ.
ಮಧುಮೇಹ ರೋಗಿಗಳ ಮೇಲೆ ಸಾಮಾನ್ಯವಾಗಿ ಪರಿಣಾಮ ಬೀರುವ ಪಾದದ ಹುಣ್ಣುಗಳು, ಸೋಂಕುಗಳು ಅಥವಾ ರಕ್ತಪರಿಚಲನಾ ಸಮಸ್ಯೆಗಳ ಆರಂಭಿಕ ಚಿಹ್ನೆಗಳನ್ನು ಗುರುತಿಸಲು ರಕ್ತನಾಳಗಳು ಮತ್ತು ನರವೈಜ್ಞಾನಿಕ ಪರೀಕ್ಷೆ ಸೇರಿದಂತೆ ಸಮಗ್ರ ಪಾದದ ಪರೀಕ್ಷೆ ಮಾಡಲಾಗುತ್ತದೆ.


ಪಾದದ ಆರೈಕೆ, ಪಾದರಕ್ಷೆ ಮತ್ತು ಚಿಕಿತ್ಸೆ ಕುರಿತು ತಿಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 7338343777ನ್ನು ಸಂಪರ್ಕಿಸುವಂತೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಶಿಕಿರಣ್ ಉಮಾಕಾಂತ್ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article