ಗೋಡೆ ಜರಿದು ಕಿಟಿಕಿ ಬಿದ್ದು ಬಾಲಕಿ ಸಾವು
Friday, May 30, 2025
ಲೋಕಬಂಧು ನ್ಯೂಸ್, ಮಂಗಳೂರು
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಗೆ ಗುಡ್ಡೆ ಕುಸಿದು ಮನೆಯ ಗೋಡೆ ಜರಿದು ಕಿಟಿಕಿ ಬಡಿದು ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಬೆಳ್ಮ ಗ್ರಾಮದ ಕಾನಕರೆ ಎಂಬಲ್ಲಿ ನಡೆದಿದೆ.ಮೃತ ಮಗುವನ್ನು ನೌಶಾದ್ ಪುತ್ರಿ ಫಾತಿಮಾ ನಯೀಮ (10) ಎಂದು ಗುರುತಿಸಲಾಗಿದೆ.
ಕಾನಕರೆಯಲ್ಲಿರುವ ನೌಶಾದ್ ಮನೆ ಮೇಲೆ ಹಿಂಬದಿಯ ಗುಡ್ಡೆ, ತಡೆಗೋಡೆ ಜರಿದು ಬಿದ್ದಿದ್ದು, ಮನೆಯ ಕೊಠಡಿಯ ಕಿಟಕಿ ಬಾಲಕಿಯ ಮೇಲೆ ಬಿದ್ದು ಈ ದುರಂತ ಸಂಭವಿಸಿದೆ.
ಮೊಂಟೆಪದವುನಲ್ಲಿ ಗುಡ್ಡ ಜರಿದು ಮೂವರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.