ಟ್ರಂಪ್ ವಿರುದ್ಧ ಮೋದಿ ಕಿಡಿ
Monday, May 12, 2025
ಲೋಕಬಂಧು ನ್ಯೂಸ್
ನವದೆಹಲಿ: ಆಪರೇಷನ್ ಸಿಂದೂರ್ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಉಗ್ರವಾದದ ವಿರುದ್ಧ ನಮ್ಮ ಹೋರಾಟ ನಿರಂತರ. ಉಗ್ರರು ಮತ್ತು ಉಗ್ರರನ್ನು ಪೋಷಿಸುವವರ ವಿರುದ್ಧ ನಮ್ಮ ಹೋರಾಟ ನಿರಂತರ ಎಂದಿದ್ದಾರೆ.ಮಾತ್ರವಲ್ಲ ಇದು ಶಾಶ್ವತ ಕದನ ವಿರಾಮ ಅಲ್ಲ, ಬದಲಾಗಿ ಇದು ತಾತ್ಕಾಲಿಕ ಕದನ ವಿರಾಮ. ಯಾವಾಗ ಬೇಕಾದರೂ ಪಾಕಿಸ್ತಾನದ ವಿರುದ್ಧ ನಾವು ದಾಳಿ ನಡೆಸಬಹುದು ಎಂದಿದ್ದಾರೆ.
ಆ ಮೂಲಕ ಶಾಶ್ವತ ಕದನ ವಿರಾಮ ಘೋಷಣೆಯಾಗಿದೆ ಎಂದಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಸೈಲೆಂಟಾಗಿ ಮೋದಿ ಟಾಂಗ್ ನೀಡಿದ್ದಾರೆ.