-->
ಮತ್ತೆ ಬಾಲ ಬಿಚ್ಚಿದ ಪಾಕ್!

ಮತ್ತೆ ಬಾಲ ಬಿಚ್ಚಿದ ಪಾಕ್!

ಲೋಕಬಂಧು ನ್ಯೂಸ್, ಶ್ರೀನಗರ
ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಖಡಕ್‌ ಭಾಷಣ ಮಾಡಿ ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದ ಬೆನ್ನಲ್ಲೇ ಪಂಜಾಬ್‌ನ ಪಠಾನ್‌ಕೋಟ್‌ನಲ್ಲಿ ಇದೀಗ ಅನುಮಾನಾಸ್ಪದ ಡ್ರೋನ್‌ಗಳ ಹಾರಾಟ ಕಂಡುಬಂದಿರುವುದಾಗಿ ವರದಿಯಾಗಿದೆ.
ಹಾಗೆಯೇ ಜಮ್ಮು-ಕಾಶ್ಮೀರದ ಸಾಂಬಾ ಪ್ರದೇಶದಲ್ಲಿಯೂ ಪಾಕಿಸ್ತಾನದ ಕಡೆಯಿಂದ ಡ್ರೋನ್ ಗಳು ಹಾರಾಟ ನಡೆಸುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.


ಭಾರತದ ಕಡೆಯಿಂದ ಈ ಡ್ರೋನ್‌ಗಳನ್ನು ಹೊಡೆದುರುಳಿಸಲಾಗುತ್ತಿದೆ. ಈ ನಡುವೆ, ಜಮ್ಮು-ಕಾಶ್ಮೀರ ಹಾಗೂ ಪಂಜಾಬ್‌ನಲ್ಲಿ ಸೈರನ್ ಮೊಳಗಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

Ads on article

Advertise in articles 1

advertising articles 2

Advertise under the article