ಆಪರೇಷನ್ ಸಿಂದೂರ್ ಇನ್ನು ಭಾರತದ ಹೊಸ ನೀತಿ
Monday, May 12, 2025
ಲೋಕಬಂಧು ನ್ಯೂಸ್
ನವದೆಹಲಿ: ಇನ್ನು ಮುಂದೆ ಆಪರೇಷನ್ ಸಿಂದೂರ್ ಭಯೋತ್ಪಾದನೆ ವಿರುದ್ಧ ಭಾರತದ ಹೊಸ ನೀತಿಯಾಗಿರುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಅವರು, ಪಾಕಿಸ್ತಾನದ ವಿರುದ್ಧ ಈ ರೀತಿಯ ದಾಳಿ ಇನ್ನು ಸಹಜವಾಗಿರುತ್ತದೆ. ನಮ್ಮ ಮೇಲೆ ದಾಳಿ ಮಾಡಿದರೆ ನಮ್ಮ ಕಡೆಯಿಂದ ಪ್ರತಿ ದಾಳಿ ಮಾಡಲಾಗುತ್ತದೆ.
ಭವಿಷ್ಯದಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ದಾಳಿ ನಡೆದರೆ ಅದಕ್ಕೆ ಭಾರತ ಮಿಲಿಟರಿ ಮೂಲಕ ಉತ್ತರ ನೀಡಲಿದೆ. ಹಾಗಾಗಿ, ಆಪರೇಷನ್ ಸಿಂದೂರ್‌ನ್ನು ಸದ್ಯಕ್ಕೆ ಮಾತ್ರ ನಿಲ್ಲಿಸಿದ್ದೇವೆ ಎಂದು ಪ್ರಧಾನಿ ಮೋದಿ ನೇರ ಎಚ್ಚರಿಕೆ ನೀಡಿದರು.