ಜು.16ರಂದು ನಿಮಿಷಪ್ರಿಯಾಗೆ ಗಲ್ಲು
Wednesday, July 9, 2025
ಲೋಕಬಂಧು ನ್ಯೂಸ್, ಯೆಮೆನ್
ಯೆಮೆನ್ ಪ್ರಜೆಯ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕೇರಳದ ಪಾಲಕ್ಕಾಡ್'ನ ನರ್ಸ್ ನಿಮಿಷಪ್ರಿಯಾಳನ್ನು ಜುಲೈ 16ರಂದು ಗಲ್ಲಿಗೇರಿಸಲಾಗುವುದು ಎಂದು ನಿಮಿಷಪ್ರಿಯಾ ತಾಯಿ ಪ್ರೇಮಾಕುಮಾರಿ ಅವರ ಪವರ್ ಆಫ್ ಅಟಾರ್ನಿ ಹೊಂದಿರುವ ಮಾನವ ಹಕ್ಕುಗಳ ಕಾರ್ಯಕರ್ತ ಸಂಧಾನಕಾರ ಸ್ಯಾಮ್ಯುಯೆಲ್ ಜೆರೋಮ್ ಹೇಳಿದ್ದಾರೆ.ನನಗೆ ಜೈಲಿನ ಮುಖ್ಯಸ್ಥರಿಂದ ಕರೆ ಬಂದಿದ್ದು, ಜುಲೈ 16ರಂದು ಗಲ್ಲಿಗೇರಿಸಲಾಗುವುದು ಎಂದು ದೃಢಪಡಿಸಿದ್ದಾರೆ.
ನಿಮಿಷಪ್ರಿಯಾಗೆ ಈ ಮಾಹಿತಿಯನ್ನು ಅಧಿಕೃತವಾಗಿ ತಿಳಿಸಲಾಗಿದೆ ಎಂದೂ ಜೆರೋಮ್ ತಿಳಿಸಿದ್ದಾರೆ.