ಸಂಬಳ ಕೊಡಲೂ ಸರ್ಕಾರದ ಬಳಿ ದುಡ್ಡಿಲ್ಲ
Wednesday, July 9, 2025
ಲೋಕಬಂಧು ನ್ಯೂಸ್, ಶಿವಮೊಗ್ಗ
ರಾಜ್ಯದ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿದೆ. ನೌಕರರಿಗೆ ಸಂಬಳ ಕೊಡಲೂ ಸರ್ಕಾರದ ಬಳಿ ದುಡ್ಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮಹಾನಗರ ಪಾಲಿಕೆ ನೌಕರರು ಬೀದಿಗಳಿದು ಅನಿರ್ಧಿಷ್ಟಾವಧಿಯ ಹೋರಾಟ ಆರಂಭಿಸಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಪಡಿತರ ಸಾಗಾಟ ವಾಹನ ಮಾಲಿಕರಿಗೆ ಬಾಡಿಗೆ ಕೊಡದೆ ಅವರೂ ಮುಷ್ಕರ ಆರಂಭಿಸಿದ್ದಾರೆ. ಅನ್ನ ಭಾಗ್ಯಕ್ಕೆ ಸರ್ಕಾರ ತಾನೇ ಕನ್ನ ಹಾಕುತ್ತಿದೆ ಎಂದು ಕುಟುಕಿದರು.
ಶಾಸಕರ ಪ್ರದೇಶಾಭಿವೃದ್ಧಿಗೂ ಅನುದಾನ ನೀಡಲು ಸರ್ಕಾರದ ಬಳಿ ಹಣವಿಲ್ಲ. ಸರ್ಕಾರ ಆಡಳಿತದ ಮೇಲೆ ಸಂಪೂರ್ಣ ಹಿಡಿತ ಕಳೆದುಕೊಂಡಿದೆ ಎಂದು ಸರ್ಕಾರವನ್ನು ಜರಿದರು.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರ ಪ್ರತಿಷ್ಠೆ, ಪುಕ್ಕಟೆ ಪ್ರಚಾರದ ಹಠಕ್ಕೆ ಬಿದ್ದು ಕಾರ್ಯಕ್ರಮ ಆಯೋಜಿಸಿ ಈಗ ಸತ್ಯವನ್ನು ಮರೆ ಮಾಚುತ್ತಿದೆ ಎಂದರು.