Brahmavara ಹೋರಾಟ ಸಮಿತಿ ಅಧ್ಯಕ್ಷ ಸತೀಶ ಪೂಜಾರಿ ನಿಧನ
Wednesday, July 23, 2025
ಲೋಕಬಂಧು ನ್ಯೂಸ್, ಬ್ರಹ್ಮಾವರ
ಬ್ರಹ್ಮಾವರ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ, ಉಡುಪಿ ತಾ. ಪಂ. ಮಾಜಿ ಸದಸ್ಯ, ಚಲನ ಚಿತ್ರ ನಿರ್ದೇಶಕ ಬಾರ್ಕೂರು ಸತೀಶ್ ಪೂಜಾರಿ (50) ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ವಿಶೇಷವಾಗಿ ಬ್ರಹ್ಮಾವರ ತಾಲೂಕು ರಚನೆಗಾಗಿ ನಿರಂತರವಾಗಿ ಶ್ರಮಿಸಿದ್ದರು. ಸಮಾಜಸೇವೆ ಮೂಲಕ ಜನಾನುರಾಗಿಯಾಗಿದ್ದರು.
ಸಂತಾಪ
ಸತೀಶ ಪೂಜಾರಿ ನಿಧನಕ್ಕೆ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಸಂತಾಪ ಸೂಚಿಸಿದ್ದಾರೆ.
ಸತೀಶ್ ಪೂಜಾರಿ ನಿಧನದಿಂದ ಮಿತ್ರನೋರ್ವನನ್ನು ಕಳೆದುಕೊಂಡಿದ್ದೇನೆ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಪ್ರಾರ್ಥಿಸುವುದಾಗಿ ಕಾಂಚನ್ ತಿಳಿಸಿದ್ದಾರೆ.