
ಶೃಂಗೇರಿ ಜಗದ್ಗುರುಗಳ ಚಾತುರ್ಮಾಸ್ಯ
Thursday, July 10, 2025
ಲೋಕಬಂಧು ನ್ಯೂಸ್, ಶೃಂಗೇರಿ
ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಶಿಷ್ಯ ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ಜೊತೆಗೂಡಿ ನರಸಿಂಹವನದ ಶ್ರೀ ಗುರು ನಿವಾಸದಲ್ಲಿ ಗುರುವಾರ ವ್ಯಾಸಪೂಜೆಯೊಂದಿಗೆ ಚಾತುರ್ಮಾಸ್ಯ ವ್ರತ ಕೈಗೊಂಡರು.
ಪೂಜಾ ನಂತರ ಗುರುಗಳು ಶೃಂಗೇರಿ ಮಠದ ಜಗದ್ಗುರುಗಳ ಪರಂಪರಾ ಸ್ತೋತ್ರ ಪಠಿಸುತ್ತಾ ಗುರು ಪರಂಪರೆಯ ಎಲ್ಲಾ ಯತಿವರೇಣ್ಯರಿಗೆ ಪೂಜೆ ಸಲ್ಲಿಸಿದರು.
ಚಾರ್ತುಮಾಸ್ಯ ವ್ರತ ಸಂದರ್ಭದಲ್ಲಿ ಭಗವಾನ್ ಸದಾಶಿವನಿಂದ ಪ್ರಾರಂಭಗೊಂಡ ಗುರು ಪರಂಪರೆಯಲ್ಲಿ 35ನೇ ಜಗದ್ಗುರುಗಳಾದ ಶ್ರೀ ಅಭಿನವ ವಿದ್ಯಾತೀರ್ಥ ಶ್ರೀಪಾದರ ವರೆಗಿನ ಗುರುಗಳಿಗೆ ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಪೂಜೆ ಸಲ್ಲಿಸಿದರು.
ಪೂಜಾ ವಿಧಿಗಳು ಮುಗಿದ ಬಳಿಕ ವಿದ್ಯುಕ್ತವಾಗಿ ಉಭಯ ಜಗದ್ಗುರುಗಳು ಚಾತುರ್ಮಾಸ್ಯ ಸಂಕಲ್ಪ ಕೈಗೊಂಡರು.
ಸೆ.7ರ ವರೆಗೆ ಚಾತುರ್ಮಾಸ್ಯ ವ್ರತ ನಡೆಯಲಿದೆ. ಈ ದಿನಗಳಲ್ಲಿ ಬರುವ ಹಬ್ಬಗಳ ಆಚರಣೆ ಜೊತೆಗೆ ಶಿಷ್ಯ ವರ್ಗದವರಿಂದ ಗುರು ವಂದನೆ ಕಾರ್ಯಕ್ರಮ ನಡೆಯಲಿದೆ.