Pant ಧರಿಸದೆ ದ್ವಿಚಕ್ರ ವಾಹನದಲ್ಲಿ ಸವಾರಿ!
Thursday, July 24, 2025
ಲೋಕಬಂಧು ನ್ಯೂಸ್, ಮಣಿಪಾಲ
ಪ್ಯಾಂಟ್ ಧರಿಸದೇ ನಡುವಯಸ್ಸಿನ ವ್ಯಕ್ತಿಯೊಬ್ಬರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವ ವೀಡಿಯೊ ವೈರಲ್ ಆಗಿದೆ.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಪ್ಯಾಂಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಹೋಗುವ ದೃಶ್ಯ ಕಂಡುಬಂದಿದ್ದು, ಈ ವ್ಯಕ್ತಿ ಯಾರು, ಅವರು ಈ ರೀತಿ ಪ್ರಯಾಣಿಸಲು ಕಾರಣವೇನು ಎಂದು ತಿಳಿದುಬಂದಿಲ್ಲ.
ಆಟಿ ಅಮಾವಾಸ್ಯೆಯಂದು ಪಾಲೆ (ಹಾಲೆ) ಮರದ ತೊಗಟೆ ತರುವಾಗ ತಡವಾಗಿರಬೇಕು ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಕುಹಕವಾಡಿದರೆ, ಇನ್ನೂ ಕೆಲವರು ಆತ ಮಾನಸಿಕ ಅಸ್ವಸ್ಥ; ಈಚೆಗಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಮಣಿಪಾಲ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು ವ್ಯಕ್ತಿಯನ್ನು ಗುರುತಿಸಿ ಕಾರಣ ತಿಳಿಯಲು ಪ್ರಯತ್ನಿಸಲಾಗುತ್ತಿದೆ.
ಕಾರಿನಲ್ಲಿ ಹೋಗುತ್ತಿದ್ದವರು ಈ ದೃಶ್ಯವನ್ನು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.