
sweets 'ಆರೋಗ್ಯಕ್ಕೆ ಹಾನಿಕರ' ಫಲಕ ಅಳವಡಿಸಿ
Friday, July 18, 2025
ಲೋಕಬಂಧು ನ್ಯೂಸ್, ನವದೆಹಲಿ
ಸಮೋಸಾ, ಜಿಲೇಬಿ, ಪಕೋಡಾ, ವಡಾಪಾವ್, ಬಿಸ್ಕತ್ತುಗಳಂಥ ತಿಂಡಿಗಳಿಂದ ಜನರಿಗೆ ಆಗುತ್ತಿರುವ ಆರೋಗ್ಯ ಸಮಸ್ಯೆಗಳನ್ನು ತಿಳಿಸುವ ಕಾರಣದಿಂದ ಕೇಂದ್ರ ಸರ್ಕಾರ ಶೀಘ್ರದಲ್ಲೇ ಸಿಗರೇಟ್ ರೀತಿಯ ಆರೋಗ್ಯ ಅಲರ್ಟ್ ನೀಡಲಿದೆ.
ತಂಬಾಕು ಉತ್ಪನ್ನಗಳ ಮೇಲೆ 'ಆರೋಗ್ಯಕ್ಕೆ ಅಪಾಯಕಾರಿ' ಎಂಬ ಅಲರ್ಟ್ ಇರುವಂತೆ ಅದೇ ರೀತಿ ಈ ಎಲ್ಲ ತಿಂಡಿಗಳ ಬಗ್ಗೆ ಸರ್ಕಾರಿ ಕ್ಯಾಂಟೀನ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಎಚ್ಚರಿಕೆ ಫಲಕ ಹಾಕುವುದು ಕಡ್ಡಾಯ ಎಂದು ಸರ್ಕಾರ ಘೋಷಿಸಿದೆ.
ಈ ಅಭಿಯಾನವನ್ನು ಮೊದಲು ನಾಗಪುರದಲ್ಲಿ ಪ್ರಾರಂಭಿಸಲಾಗುತ್ತದೆ.