-->
Udupi: ಆ.1ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವಕ್ಕೆ ಚಾಲನೆ

Udupi: ಆ.1ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವಕ್ಕೆ ಚಾಲನೆ

ಲೋಕಬಂಧು ನ್ಯೂಸ್, ಉಡುಪಿ
ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ ಆಶ್ರಯದಲ್ಲಿ 48 ದಿನಗಳ ಪರ್ಯಂತ ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವದ ಪ್ರಾರಂಭೋತ್ಸವ ಆಗಸ್ಟ್ 1ರಂದು ನಡೆಯಲಿದೆ.
ಬೆಳಿಗ್ಗೆ 6 ಗಂಟೆಗೆ ಯೋಗ ಸಂಸ್ಥೆಗಳ ಯೋಗಾರ್ಥಿಗಳಿಂದ ಸೂರ್ಯಮಂಡಲೋಪಾಸನೆ ಸಹಿತ ಸಾಮೂಹಿಕ ಸೂರ್ಯ ನಮಸ್ಕಾರ, ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಂದ ಸಾಮೂಹಿಕ ಶ್ರೀಕೃಷ್ಣ ಮಂತ್ರೋಪದೇಶ ನಡೆಯಲಿದೆ.


ಬೆಳಗ್ಗೆ 10 ಗಂಟೆಗೆ ವಿಶೇಷ ಭಜನಾ ಮಂಡಲೋತ್ಸವಕ್ಕೆ ಚಾಲನೆ, ಸಂಜೆ 5 ಗಂಟೆಗೆ ವಿಶೇಷ ವೇಣುವಾದನ ಮಂಡಲೋತ್ಸವಕ್ಕೆ ಚಾಲನೆ, ಸಂಜೆ 6 ಗಂಟೆಗೆ ಜ್ಞಾನ ಮಂಡಲೋತ್ಸವಕ್ಕೆ ಚಾಲನೆ ನೀಡಲಾಗುವುದು.


ರಾಜಾಂಗಣದಲ್ಲಿ ಕೃಷ್ಣಾರ್ಪಣ
ಬೆಂಗಳೂರಿನ ಸಿಲಂಬಮ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ವತಿಯಿಂದ ಆ. 1ರಂದು ಸಂಜೆ 7 ಗಂಟೆಗೆ ರಾಜಾಂಗಣದಲ್ಲಿ ಕೃಷ್ಣಾರ್ಪಣ ಭರತನಾಟ್ಯ ವಿಶೇಷ ಕಾರ್ಯಕ್ರಮ ನಡೆಯಲಿದೆ.


ಶ್ರೀಕೃಷ್ಣ ಮಠದ ಸೂರ್ಯಶಾಲೆಯಲ್ಲಿ ಆ. 1ರಂದು ಸಂಜೆ 5.30ರಿಂದ ರಾತ್ರಿ 7 ಗಂಟೆ ತನಕ ಪ್ರಣವ್ ಅಡಿಗ ಅವರಿಂದ ಕೊಳಲು ವಾದನ ಸೇವೆ ನಡೆಯಲಿದೆ 

Ads on article

Advertise in articles 1

advertising articles 2

Advertise under the article