Bengaluru: ಶೀರೂರು ಶ್ರೀಗಳಿಗೆ ಗೌರವ
Sunday, August 31, 2025
ಲೋಕಬಂಧು ನ್ಯೂಸ್, ಬೆಂಗಳೂರು
ಇಲ್ಲಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಚಾತುರ್ಮಾಸ್ಯ ವ್ರತನಿಷ್ಠರಾದ ಭಾವಿ ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರಿಗೆ ತಿರುಮಲ ತಿರುಪತಿ ಟಿಟಿಡಿ ವತಿಯಿಂದ ಗೌರವ ಸಮರ್ಪಿಸಲಾಯಿತು.ಟಿಟಿಡಿಯ ಆನಂದತೀರ್ಥ ಪಗಡಾಲ್ ಶ್ರೀಗಳಿಗೆ ಶ್ರೀಶ್ರೀನಿವಾಸ ದೇವರ ಪ್ರಸಾದ ನೀಡಿದರು. ಶೀರೂರು ಮಠದ ದಿವಾನ ಡಾ.ಉದಯ ಕುಮಾರ್ ಸರಳತ್ತಾಯ ಇದ್ದರು.
ರಂಗನಾಥಸ್ವಾಮಿ ಪ್ರಸಾದ
ಇದೇ ಸಂದರ್ಭದಲ್ಲಿ ಶ್ರೀರಂಗಮ್ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ವತಿಯಿಂದ ಶೀರೂರು ಶ್ರೀಪಾದರಿಗೆ ಶ್ರೀ ರಂಗನಾಥ ಸ್ವಾಮಿಯ ಪ್ರಸಾದ ನೀಡಿ ಗೌರವಿಸಲಾಯಿತು.