-->
Kollur: ನಾಪತ್ತೆಯಾಗಿದ್ದ ಮಹಿಳೆ ನೀರುಪಾಲು

Kollur: ನಾಪತ್ತೆಯಾಗಿದ್ದ ಮಹಿಳೆ ನೀರುಪಾಲು

ಲೋಕಬಂಧು ನ್ಯೂಸ್, ಕೊಲ್ಲೂರು
ಇಲ್ಲಿನ ಶ್ರೀ ಮೂಕಾಂಬಿಕಾ ದೇವಳಕ್ಕೆ ಯಾತ್ರಾರ್ಥಿಯಾಗಿ ಬಂದಿದ್ದ ಬೆಂಗಳೂರು ತ್ಯಾಗರಾಜ ನಗರದ ವಸುಧಾ ಚಕ್ರವರ್ತಿ (45) ಸೌಪರ್ಣಿಕಾ ನದಿಪಾಲಾಗಿರುವುದಾಗಿ ಕೊಲ್ಲೂರು ಪೊಲೀಸರು ತಿಳಿಸಿದ್ದಾರೆ. ಆಕೆಯ ಶವಪತ್ತೆಗೆ ಹುಡುಕಾಟ ನಡೆಸಲಾಗುತ್ತಿದೆ.
ಮೃತ ವಸುಧಾ ಮಾನಸಿಕ ಅಸ್ವಸ್ಥೆಯಾಗಿದ್ದಳು ಎಂದು ಆಕೆಯ ತಾಯಿ ವಿಮಲಾ ಪೊಲೀಸರಿಗೆ ತಿಳಿಸಿದ್ದಾರೆ.


ಆ. 27ರಂದು ವಸುಧಾ ತನ್ನ ಕೆಎ04ಎಂವೈ7092 ಕಾರಿನಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ  ದೇವಸ್ಥಾನ ಕ್ಕೆ ಆಗಮಿಸಿದ್ದು, ವಸತಿ ಗೃಹವೊಂದರಲ್ಲಿ ಕಾರು ನಿಲ್ಲಿಸಿ ಹೋಗಿರುವ ವಿಚಾರ ತಿಳಿದಿದ್ದು, ಮಗಳ ಮೊಬೈಲ್‌‌ ಸಂಖ್ಯೆಗೆ ಕರೆ ಮಾಡಿದರೂ ಸಿಗದ ಹಿನ್ನೆಲೆಯಲ್ಲಿ ಆ. 29ರಂದು ವಿಮಲಾ ಕೊಲ್ಲೂರಿಗೆ ಬಂದು ಮಗಳ ಬಗ್ಗೆ  ದೇವಸ್ಥಾನದ ಸಿಬ್ಬಂದಿಯಲ್ಲಿ ವಿಚಾರಿಸಿದ್ದು, ವಸುಧಾ ಚಕ್ರವರ್ತಿ ದೇವಸ್ಥಾನದ ಪ್ರಾಂಗಣದಲ್ಲಿ ಮಾನಸಿಕ ಸಮಸ್ಯೆ ಇರುವ ರೀತಿಯಲ್ಲಿ ಅಸಭ್ಯವಾಗಿ ವರ್ತಿಸಿ, ನಂತರ ಅಲ್ಲಿಂದ ರಸ್ತೆಯಲ್ಲಿ ಓಡಿಕೊಂಡು ಹೋಗಿರುವುದಾಗಿ ತಿಳಿಸಿದರು.


ಆಕೆ ನದಿಯಲ್ಲಿ ಇಳಿದಿರುವ ವಿಚಾರ ತಿಳಿದುಬಂದಿದ್ದು, ಆಕೆ ನೀರುಪಾಲಾಗಿರುವುದಾಗಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಕೊಲ್ಲೂರು ಠಾಣೆಯಲ್ಲಿ  ಮಹಿಳೆ ಕಾಣೆ ಬಗ್ಗೆ ದೂರು ದಾಖಲಾಗಿತ್ತು.


ಇದೀಗ ಸ್ಥಳೀಯರು, ಬೈಂದೂರು ಅಗ್ನಿಶಾಮಕ ದಳ ಹಾಗೂ ಈಶ್ವರ್ ಮಲ್ಪೆ ತಂಡ ಹುಡುಕಾಟ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article