.jpg)
Malpe: ಮಗುಚಿದ ದೋಣಿ: ಮೀನುಗಾರರು ಪಾರು
Friday, August 29, 2025
ಲೋಕಬಂಧು ನ್ಯೂಸ್, ಮಲ್ಪೆ
ಇಲ್ಲಿನ ಸಮುದ್ರ ತೀರದ ತೊಟ್ಟಂ ಬಳಿ ಸಮುದ್ರದ ಅಲೆಯ ರಭಸಕ್ಕೆ ದೋಣಿ ಮಗುಚಿ ಬಿದ್ದಿದ್ದು, ಶುಕ್ರವಾರ ಏಡಿಬಲೆಗೆ ಹೋದ ನಾಲ್ವರು ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತೊಟ್ಟಂ ವಾರ್ಡ್'ನ ನಗರಸಭಾ ಸದಸ್ಯ ಯೋಗೇಶ್ ಅವರು ಈಶ್ವರ್ ಮಲ್ಪೆ ತಂಡಕ್ಕೆ ಮಾಹಿತಿ ನೀಡಿದ್ದು, ಸ್ಥಳೀಯರಾದ ಪ್ರವೀಣ್, ಉದಯ್ ಜೊತೆ ಸೇರಿ ಲೈಫ್ ಜಾಕೆಟ್ ನೀಡಿ ನಾಲ್ಕು ಮಂದಿ ಮೀನುಗಾರರ ಜೀವ ಉಳಿಸಲಾಗಿದೆ ಎಂದು ಮುಳುಗು ತಜ್ಞ ಈಶ್ವರ್ ಮಲ್ಪೆ ತಿಳಿಸಿದ್ದಾರೆ.
ಕ್ಷಣ ಕ್ಷಣಕ್ಕೂ ಮಲ್ಪೆಯ ಕಡಲು ಉಕ್ಕೇರಿ ಪ್ರಕ್ಷುಬ್ಧವಾಗಿದೆ. ಯಾರೂ ನೀರಿಗಿಳಿಯಕೂಡದು. ಮೀನುಗಾರರು ಲೈಫ್ ಜಾಕೆಟ್ ಧರಿಸಿ ಮೀನುಗಾರಿಕೆಗೆ ತರೆಳುವಂತೆ ಈಶ್ವರ್ ಮಲ್ಪೆ ಮನವಿ ಮಾಡಿದ್ದಾರೆ.