ಗಜಮುಖನೆ ಗಣಪತಿಯೇ ನಿನಗೆ ವಂದನೆ
Wednesday, August 27, 2025
ಲೋಕಬಂಧು ನ್ಯೂಸ್, ಉಡುಪಿ/ಮಂಗಳೂರು
ಭಾದ್ರಪದ ಶುಕ್ಲ ಚತುರ್ಥಿ ಬುಧವಾರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಶ್ರದ್ಧಾಭಕ್ತಿಯಿಂದ ಗಣೇಶನ ಹಬ್ಬವನ್ನು ಆಚರಿಸಲಾಯಿತು. ಗಣಪತಿಯ ಕ್ಷೇತ್ರಗಳಾದ ಆನೆಗುಡ್ಡೆ ಕುಂಭಾಶಿ, ಹಟ್ಟಿಯಂಗಡಿ, ಶರವು, ಗಂಜಿಮಠ, ಸೌತಡ್ಕ ಮೊದಲಾದೆಡೆಗಳಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು.ಗಣಹೋಮ, ಮೂಡಪ್ಪ ಸೇವೆ, ರಂಗಪೂಜೆ ಇತ್ಯಾದಿ ನಡೆಸಲಾಯಿತು.
ವಿವಿಧೆಡೆ ಪೆಂಡಾಲ್'ಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಸಲಾಯಿತು. ಉಡುಪಿ ಜಿಲ್ಲೆಯ 486 ಕಡೆಗಳಲ್ಲಿ ಹಾಗೂ ದ.ಕ. ಜಿಲ್ಲೆಯ 398 ಕಡೆಗಳಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಿಸಲಾಯಿತು.