-->
Udupi: ನವಜೀವನ ತರಬೇತಿ ಸಮಾಪನ

Udupi: ನವಜೀವನ ತರಬೇತಿ ಸಮಾಪನ

ಲೋಕಬಂಧು ನ್ಯೂಸ್, ಉಡುಪಿ
ದೊಡ್ಡಣಗುಡ್ಡೆ ಡಾ.ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆಯಲ್ಲಿ ಕಮಲ್ ಎ. ಬಾಳಿಗ ಚಾರಿಟೆಬಲ್ ಟ್ರಸ್ಟ್ ಮುಂಬೈ ಮತ್ತು ಒನ್ ಗುಡ್ ಸ್ಟೆಪ್ ಸಂಯುಕ್ತ‌ ನಡೆದ ನವಜೀವನ ಲೇ ಕೌನ್ಸಿಲರ್'ನ 6ನೇ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ ಭಾನುವಾರ ಆಸ್ಪತ್ರೆಯ ಕಮಲ್ ಎ.ಬಾಳಿಗ ಸಭಾಂಗಣದಲ್ಲಿ ನಡೆಯಿತು.ಮುಂಬೈನ ಡಾ.ಎ.ವಿ. ಬಾಳಿಗ ಚಾರಿಟೀಸ್ ಮತ್ತು ಕಮಲ್ ಎ. ಬಾಳಿಗ ಚಾರಿಟೆಬಲ್ ಟ್ರಸ್ಟ್ ವಿಶ್ವಸ್ಥ ಡಾ.ಆರ್.ವಿ.ಬಾಳಿಗ ಅಧ್ಯಕ್ಷತೆ ವಹಿಸಿದ್ದರು.ನಿವೃತ್ತ ಬ್ಯಾಂಕ್ ಅಧಿಕಾರಿ ಹಾಗೂ ಲೇ ಪರ್ಸನ್ ಕೌನ್ಸಿಲರ್ ರಾಘವೇಂದ್ರ ರಾವ್ ಅಭ್ಯಾಗತರಾಗಿದ್ದರು. ಆಸ್ಪತ್ರೆಯ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ ಮತ್ತು ಡಾ.ಮಾನಸ್ ಇ. ಆರ್‌. ವೇದಿಕೆಯಲ್ಲಿದ್ದರು.


ನವಜೀವನ ಲೇ ಕೌನ್ಸಿಲರ್ ತರಬೇತಿ ಕಾರ್ಯಾಗಾರದ ಸಂಯೋಜಕಿ ಮತ್ತು ಆಸ್ಪತ್ರೆಯ ಆಡಳಿತ ಅಧಿಕಾರಿ ಸೌಜನ್ಯ ಶೆಟ್ಟಿ ಸ್ವಾಗತಿಸಿದರು. ದೀಪಶ್ರೀ ನಿರೂಪಿಸಿ, ವಂದಿಸಿದರು. ಆಸ್ಪತ್ರೆಯ ಭದ್ರತಾ ಸಿಬಂದಿ ಭಾಗ್ಯಶ್ರೀ ಪ್ರಾರ್ಥಿಸಿದರು.


ನವಜೀವನ ಲೇ ಕೌನ್ಸಿಲರ್'ನ 7ನೇ ಬ್ಯಾಚಿನ ತರಬೇತಿ ಕಾರ್ಯಗಾರ ಅಕ್ಟೋಬರ್ ತಿಂಗಳಲ್ಲಿ ಆರಂಭಗೊಳ್ಳಲಿದೆ.

Ads on article

Advertise in articles 1

advertising articles 2

Advertise under the article