
Udupi: ಭರತ ನಾಟ್ಯದಲ್ಲಿ ಪ್ರಥಮ ರ್ಯಾಂಕ್
Sunday, August 31, 2025
ಲೋಕಬಂಧು ನ್ಯೂಸ್, ಉಡುಪಿ
ಡಾ.ಗಂಗೂಬಾಯಿ ಹಾನಗಲ್ ವಿ.ವಿ. ನಡೆಸಿದ ಭರತ ನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಅದಿತಿ ಮೆಹಂದಳೆ ಶೇ.91.8 ಶೇ. ಅಂಕದೊಂದಿಗೆ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿದ್ದಾರೆ.
ಶನಿವಾರ ಮೈಸೂರು ವಿ.ವಿ.ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ ಪಡೆದರು.
ಅವರು ಉಡುಪಿ ಸೃಷ್ಟಿ ನೃತ್ಯ ಕಲಾ ಕುಟೀರದ ಸಂಸ್ಥಾಪಕಿ ಮಂಜರಿ ಚಂದ್ರ ಪುಷ್ಪರಾಜ್ ಶಿಷ್ಯೆ. ಮಣಿಪಾಲ ಇನ್ ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ (ಎಂಐಸಿ)ನಲ್ಲಿ ಬ್ಯಾಚುಲರ್ ಇನ್ ಮೀಡಿಯಾ ಆ್ಯಂಡ್ ಕಮ್ಯುನಿಕೇಷನ್ ಶಿಕ್ಷಣ ಪಡೆಯುತ್ತಿರುವ ಅದಿತಿ, ಕೇಶವ ಮೆಹೆಂದಳೆ ಹಾಗೂ ರಂಜನಾ ದಂಪತಿ ಪುತ್ರಿ.