Udupi: ಇಂದು ಕೃಷ್ಣ ಮಠದಲ್ಲಿ ಹನಮಕ್ಕನವರ್ ಉಪನ್ಯಾಸ
Sunday, August 31, 2025
ಲೋಕಬಂಧು ನ್ಯೂಸ್, ಉಡುಪಿ
ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವದ ಜ್ಞಾನಮಂಡಲೋತ್ಸವದಲ್ಲಿ ಆ.31ರಂದು ರಾಜಾಂಗಣದಲ್ಲಿ ಖ್ಯಾತ ನಿರೂಪಕ, ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನಮಕ್ಕನವರ್ ಉಪನ್ಯಾಸ ನಡೆಯಲಿದೆ.ಸಂಜೆ 6ರಿಂದ 7ರ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಅಜಿತ್ ಅವರು 'ಹಿಂದೂ ಧಾರ್ಮಿಕ ಶ್ರದ್ಧಾಕೇಂದ್ರ- ರಾಜಕೀಯ ಹಸ್ತಕ್ಷೇಪ' ವಿಚಾರದಲ್ಲಿ ಮಾತನಾಡುವರು ಎಂದು ಮಠದ ದಿವಾನ ನಾಗರಾಜ ಆಚಾರ್ಯ ಹಾಗೂ ಕಾರ್ಯದರ್ಶಿ ಪ್ರಸನ್ನಾಚಾರ್ಯ ತಿಳಿಸಿದ್ದಾರೆ.