Udupi: ಕೃಷ್ಣ ಮಠದಲ್ಲಿ ಚೌತಿಹಬ್ಬ ಆಚರಣೆ
Wednesday, August 27, 2025
ಲೋಕಬಂಧು ನ್ಯೂಸ್, ಉಡುಪಿ
ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ ಆಶ್ರಯದಲ್ಲಿ ಬುಧವಾರ ಚೌತಿಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.ಶ್ರೀಕೃಷ್ಣ ಮಠ, ಬಡಗುಮಾಳಿಗೆ ಹಾಗೂ ಗೀತಾ ಮಂದಿರಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಯಿತು.ಮಹೋತ್ಸವದ ಅಂಗವಾಗಿ ಗಣಹೋಮ, ವಿಶೇಷ ಪೂಜೆ ಹಾಗೂ ರಾತ್ರಿ ರಂಗಪೂಜೆ ನಡೆಯಿತು.ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಭಾಗವಹಿಸಿದ್ದರು.