ಲೋಕಬಂಧು ನ್ಯೂಸ್, ಉದ್ಯಾವರ
ಹಿರಿಯ ಕೃಷಿಕ, ಮಂಡಲ ಪಂಚಾಯತ್ ಮಾಜಿ ಸದಸ್ಯ ಇಲ್ಲಿನ ಸಂಪಿಗೆ ನಗರ ನಿವಾಸಿ ರೋಬರ್ಟ್ ಫೆರ್ನಾಂಡಿಸ್ ಅಲ್ಪಕಾಲದ ಅಸೌಖ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಆ.30ರಂದು ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಮೃತರು ಉಡುಪಿ ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ ರೋಯ್ಸ್ ಫೆರ್ನಾಂಡಿಸ್ ಸಹಿತ ಈರ್ವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.