Dharmastala: ಬಂಗ್ಲೆಗುಡ್ಡೆಯಲ್ಲಿ ಮತ್ತಷ್ಟು ಮಾನವ ಅವಶೇಷ ಪತ್ತೆ
Friday, September 19, 2025
ಲೋಕಬಂಧು ನ್ಯೂಸ್, ಧರ್ಮಸ್ಥಳ
ಧರ್ಮಸ್ಥಳ ಗ್ರಾಮದಲ್ಲಿ ಹೆಣ ಹೂಳಿದ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ ಬಂಗ್ಲೆಗುಡ್ಡೆಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದು, ಎರಡನೇ ದಿನವಾದ ಗುರುವಾರವೂ ಮಾನವನ ತಲೆ ಬುರುಡೆಯ ಅವಶೇಷಗಳು, ಎಲುಬುಗಳು ಪತ್ತೆಯಾಗಿವೆ.ನೇತ್ರಾವತಿ ಸ್ನಾನಘಟ್ಟದ ಬಂಗ್ಲೆಗುಡ್ಡೆ ಕಾಡಿನಲ್ಲಿ ಮಧ್ಯಾಹ್ನ 12.30ಕ್ಕೆ ವೈದ್ಯರ ತಂಡ, ಎಫ್‌ಎಸ್‌ಎಲ್ ತಂಡ, ಸೋಕೋ ಸಿಬ್ಬಂದಿ ಸೇರಿದಂತೆ ಅಧಿಕಾರಿಗಳು ಶೋಧ ಕಾರ್ಯಕ್ಕೆ ಆಗಮಿಸಿದ್ದರು. ಈ ವೇಳೆ ಅರಣ್ಯ ಭಾಗದಲ್ಲಿ ಚದುರಿಕೊಂಡಿರುವ ರೀತಿಯಲ್ಲಿ ಮಾನವನ ಎಲುಬುಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.