Dharmastala: ಬಂಗ್ಲೆಗುಡ್ಡೆಯಲ್ಲಿ ಎಸ್ಐಟಿ ಶೋಧ ವೇಳೆ ಅಸ್ಥಿಪಂಜರ ಪತ್ತೆ
Thursday, September 18, 2025
ಲೋಕಬಂಧು ನ್ಯೂಸ್, ಧರ್ಮಸ್ಥಳ
ಧರ್ಮಸ್ಥಳ ಗ್ರಾಮದಲ್ಲಿ ಹೆಣ ಹೂಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೇತ್ರಾವತಿ ಸ್ನಾನಘಟ್ಟ ಸಮೀಪದ ಬಂಗ್ಲೆಗುಡ್ಡೆಯಲ್ಲಿ ಶೋಧ ನಡೆಸಿರುವ ಎಸ್ಐಟಿ ತಂಡಕ್ಕೆ ಹಲವು ಕಡೆಗಳಲ್ಲಿ ಮನುಷ್ಯನ ಅಸ್ಥಿ ಪಂಜರದ ಅವಶೇಷ ಪತ್ತೆಯಾಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ.ಆದರೆ, ಎಷ್ಟು ಕಡೆ ಮೂಳೆ ಪತ್ತೆಯಾಗಿವೆ ಹಾಗೂ ಅವುಗಳು ಭೂಮಿ ಮೇಲ್ಭಾಗದಲ್ಲಿ ಸಿಕ್ಕಿದೆಯೋ ಅಥವಾ ಮಣ್ಣು ಸವೆದು ಹೋಗಿ ಭೂಮಿಯೊಳಗೆ ಸಿಕ್ಕಿದೆಯೋ ಎಂಬುದು ಎಸ್ಐಟಿ ತನಿಖೆಯಿಂದಲೇ ಗೊತ್ತಾಗಬೇಕಿದೆ.
ಕಾಡಿನಲ್ಲಿ ಈ ರೀತಿ ಮನುಷ್ಯನ ಕಳೇಬರ ಬಂದಿದೆ ಎನ್ನುವುದು ಅತ್ಯಂತ ಗಂಭೀರ ವಿಚಾರವಾಗಿದೆ.