Scootyಯಲ್ಲಿ ಮಾದಕ ವಸ್ತು ಮಾರುತ್ತಿದ್ದಾತನ ಸೆರೆ
Tuesday, September 16, 2025
ಲೋಕಬಂಧು ನ್ಯೂಸ್, ಮಣಿಪಾಲ
ಇಲ್ಲಿನ ವಿದ್ಯಾರತ್ನ ನಗರದ ಜಿಲ್ಲಾಧಿಕಾರಿ ಕಚೇರಿ ರಸ್ತೆಯ ನಂದಿನಿ ಮಿಲ್ಕ್ ಪಾರ್ಲರ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಸ್ಕೂಟಿಯಲ್ಲಿ ಮಾದಕ ವಸ್ತುಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಣಿಪಾಲ ಪೊಲೀಸರು ಸೆ.15ರಂದು ಸೋಮವಾರ ದಸ್ತಗಿರಿ ಮಾಡಿದ್ದಾರೆ.ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಪೊಲೀಸರು ಆರೋಪಿ ಬೆಳಪು ನಿವಾಸಿ ಮಹಮ್ಮದ್ ಅರ್ಫಾನ್ (26)ನನ್ನು ವಶಕ್ಕೆ ಪಡೆದುಕೊಂಡು ಆತನಿಂದ ಕೆಎ20 ಎಚ್ಎಫ್ 8927 ನಂಬರಿನ ಸ್ಕೂಟಿ, ಎರಡು ಮೊಬೈಲ್ ಹಾಗೂ ಸುಮಾರು 13 ಸಾವಿರ ರೂ. ಮೌಲ್ಯದ 6.61 ಗ್ರಾಂ. ಎಂಡಿಎಂಎ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ವಶಪಡಿಸಲಾದ ಎಲ್ಲ ಸೊತ್ತುಗಳ ಒಟ್ಟು ಮೌಲ್ಯ 60 ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.