.jpg)
Udupi: ಜನಮನ ರಂಜಿಸಿದ 'ಅಲಾರೆ ಗೋವಿಂದ'
Monday, September 15, 2025
ಲೋಕಬಂಧು ನ್ಯೂಸ್, ಉಡುಪಿ
ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ ಆಶ್ರಯದಲ್ಲಿ ಸೋಮವಾರ ನಡೆದ ವಿಟ್ಲಪಿಂಡಿ ಮಹೋತ್ಸವದಲ್ಲಿ ಮುಂಬೈಯ ಅಲಾರೆ ಗೋವಿಂದ ಜನಮನ ರಂಜಿಸುವಲ್ಲಿ ಯಶಸ್ವಿಯಾಯಿತು.
ಮುಂಬೈಯ ಬಾಲಮಿತ್ರ ಮಂಡಳಿಯ ಸುಮಾರು 120 ಮಂದಿ ಆಲಾರೇ ಗೋವಿಂದ ಕಲಾವಿದರು ಉಡುಪಿಗೆ ಆಗಮಿಸಿದ್ದು, ಮೊಸರು ಕುಡಿಕೆ ಒಡೆಯುವ ಮೈನವಿರೇಳಿಸುವ ಸಾಹಸ ಪ್ರದರ್ಶಿಸಿದರು.
ಈ ಕಲಾವಿದರು ಸುತ್ತಲೂ ಒಬ್ಬರ ಮೇಲೆ ಒಬ್ಬರು 7 ಹಂತಗಳಲ್ಲಿ ನಿಂತು 50 ಅಡಿ ಎತ್ತರದಲ್ಲಿ ಕಟ್ಟಿರುವ ಕುಡಿಕೆಗಳನ್ನು ಒಡೆದರು.
ಕೃಷ್ಣಮಠದ ರಥಬೀದಿಯಲ್ಲಿ ಪ್ರಥಮ ಪ್ರದರ್ಶನ ನೀಡಿದ ತಂಡ, ಬಳಿಕ ನಗರದ 10 ಕಡೆಗಳಲ್ಲಿ ಪ್ರದರ್ಶನ ನೀಡಿತು.
ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.
ಮುಂಬೈ ಉದ್ಯಮಿ ಮಧುಸೂದನ ಕೆಮ್ಮಣ್ಣು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಆಯತಪ್ಪಿ ಬಿದ್ದ ಬಾಲಕ
ಅಲಾರೆ ಗೋವಿಂದ ತಂಡ ಗೀತಾ ಮಂದಿರ ಬಳಿ ಪ್ರದರ್ಶನ ನೀಡುತ್ತಿದ್ದ ವೇಳೆ ಬಾಲಕ ಆಯತಪ್ಪಿ ಬಿದ್ದಿದ್ದು, ತೀವ್ರ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಧೃತಿಗೆಡದ ತಂಡ ಪ್ರದರ್ಶನ ಮುಂದುವರಿಸಿತು.