KMC: ಕ್ವಿಡೆಲ್ ಆರ್ಥೋ ಜೊತೆ ಇಮ್ಯುನೊ ಹೆಮಾಟಾಲಜಿ ಶ್ರೇಷ್ಠತೆಯ ಕೇಂದ್ರದೊಂದಿಗೆ ಒಡಂಬಡಿಕೆ
Friday, November 10, 2023
ಉಡುಪಿ, ನ.10 (ಲೋಕಬಂಧು ವಾರ್ತೆ): ಇಮ್ಯುನೊ ಹೆಮಟಾಲಜಿಯಲ್ಲಿನ ಶ್ರೇಷ್ಠತೆ (ಸಿಓಇ)ಯನ್ನು ಪ್ರಸ್ತುತ ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಇಮ್ಯುನೊ ಹೆಮಟಾಲಜಿ ಮತ್ತು ರಕ್ತ ವರ್ಗಾವಣೆ ವಿಭಾಗದಲ್ಲಿ ಸ್ಥಾಪಿಸಲಾಗಿದೆ.
ಈ ಸಂದರ್ಭದಲ್ಲಿ ಮಾಹೆ ಉಪಕುಲಪತಿ ಲೆl ಜl ಡಾ.ಎಂ.ಡಿ.ವೆಂಕಟೇಶ್ ಮಾತನಾಡಿ, ಕಸ್ತೂರ್ಬಾ ಆಸ್ಪತ್ರೆಯ ರಕ್ತ ಕೇಂದ್ರ ಮತ್ತು ಕ್ವಿಡೆಲ್ ಆರ್ಥೋ ತಂಡ ರೋಗಿಗಳ ಆರೈಕೆ ಮತ್ತು ರಕ್ತದ ಸುರಕ್ಷತೆಗೆ ಹೆಚ್ಚು ಪ್ರಯೋಜನಕಾರಿಯಾದ ತಂಡದ ಸಹಯೋಗದ ಪ್ರಯತ್ನವನ್ನು ಶ್ಲಾಘಿಸಿದರು.
ರಿಜಿಸ್ಟ್ರಾರ್ ಡಾ. ಗಿರಿಧರ್ ಕಿಣಿ ಅವರು ಮಾಹೆ ಮತ್ತು ಕ್ವಿಡೆಲ್ ಆರ್ಥೋ ನಡುವಿನ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು.
ಕ್ವಿಡೆಲ್ ಆರ್ಥೋ ಜನರಲ್ ಮ್ಯಾನೇಜರ್ ಕೃಷ್ಣಮೂರ್ತಿ, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನೊಂದಿಗೆ ಸಂಬಂಧ ಹೊಂದಲು ನಾವು ಹೆಮ್ಮೆಪಡುತ್ತೇವೆ ಮತ್ತು ಭಾರತದಲ್ಲಿ ಇದೇ ಮೊದಲನೆಯದು ಎಂದರು.
ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ. ಆನಂದ್ ವೇಣುಗೋಪಾಲ್ ಅವರು ಕ್ವಿಡೆಲ್ ಆರ್ಥೋ ಮತ್ತು ಕೇಂದ್ರದ ಸಂಯೋಜಕರಿಗೆ ಮೆಚ್ಚುಗೆ ಮತ್ತು ಕೃತಜ್ಞತೆ ಸಲ್ಲಿಸಿದರು.
ಕೇಂದ್ರದ ಸಂಯೋಜಕ ಹಾಗೂ ಇಮ್ಯುನೊ ಹೆಮಟಾಲಜಿ ಮತ್ತು ರಕ್ತ ವರ್ಗಾವಣೆ ವಿಭಾಗ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥೆ ಡಾ. ಶಮೀ ಶಾಸ್ತ್ರಿ, ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾನಮಾನದೊಂದಿಗೆ ನಾವು ಇಮ್ಯುನೊ ಹೆಮಾಟಾಲಜಿ ಕ್ಷೇತ್ರದಲ್ಲಿ ಕ್ಲಿನಿಕಲ್ ಮತ್ತು ಶೈಕ್ಷಣಿಕ ಉತ್ಕೃಷ್ಟತೆಯನ್ನು ಅನುಷ್ಠಾನಗೊಳಿಸುವ ಮೂಲಕ ಮತ್ತು ವಿವಿಧ ಉತ್ತಮ ಅಭ್ಯಾಸಗಳನ್ನು ಮುನ್ನಡೆಸುವುದು, ಪ್ರಕ್ರಿಯೆಯ ಶ್ರೇಷ್ಠತೆ, ದಾನಿಗಳ ಅಭಿದಮನಿಯಿಂದ ರೋಗಿಯ ಅಭಿದಮನಿ ಪ್ರವಾಹದಲ್ಲಿ ನಿರಂತರ ಗುಣಮಟ್ಟದ ಸುಧಾರಣೆ ಇತ್ಯಾದಿ ಕೇಂದ್ರದ ಉದ್ದೇಶ ಇಡೀ ರಾಷ್ಟ್ರಕ್ಕೆ ಇದು ಉಲ್ಲೇಖ (ರೆಫರಲ್)ದ ಕೇಂದ್ರವಾಗಿ ಕಾರ್ಯನಿರ್ವಹಿಸುವುದು ಮತ್ತು ಇಮ್ಯುನೊ ಹೆಮಾಟಾಲಜಿ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ನಾವೀನ್ಯತೆ ಉತ್ತೇಜಿಸುವುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿ ಡಾ. ಶರತ್ ಕುಮಾರ್ ರಾವ್, ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ. ಪದ್ಮರಾಜ್ ಹೆಗ್ಡೆ, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮೊದಲಾದವರಿದ್ದರು.