.jpg)
Upupi Police: ನೇಜಾರು ಕೊಲೆ ಪ್ರಕರಣ ಭೇದಿಸಿದ ಪೊಲೀಸರಿಗೆ ಅಭಿನಂದನೆ
Thursday, November 16, 2023
ಉಡುಪಿ, ನ.16 (ಲೋಕಬಂಧು ವಾರ್ತೆ): ನೇಜಾರು ತೃಪ್ತಿ ಲೇಔಟ್ ನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಅಮಾನುಷವಾಗಿ ಹತ್ಯೆ ನಡೆಸಿದ ಆರೋಪಿಯನ್ನು ಬಂಧಿಸಿದ ಉಡುಪಿ ಪೊಲೀಸರ ಕ್ರಮವನ್ನು ಶ್ಲಾಘಿಸಿದ ಕಾಂಗ್ರೆಸ್, ಗುರುವಾರ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ನೇತೃತ್ವದಲ್ಲಿ ಎಸ್.ಪಿ. ಡಾ. ಕೆ. ಅರುಣ್ ಅವರನ್ನು ಭೇಟಿ ಮಾಡಿ ಅಭಿನಂದಿಸಲಾಯಿತು.
ನ. 12ರಂದು ಬೆಳಿಗ್ಗೆ ತಾಯಿ ಹಸೀನಾ ಮತ್ತು ಮೂವರು ಮಕ್ಕಳಾದ ಅಫ್ನಾನ್, ಅಯ್ನಾಝ್ ಹಾಗೂ ಆಸಿಮ್ ಕೊಲೆ ನಡೆಸಿದ ಆರೋಪಿ ಪ್ರವೀಣ್ ಅರುಣ್ ಚೌಗಲೆಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅವರ ನೇತೃತ್ವದ ಸಮಸ್ತ ತಂಡದ ಕಾರ್ಯದಿಂದ ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯ ಮೇಲಿದ್ದ ವಿಶ್ವಾಸ ಹೆಚ್ಚಾಗಿದೆ ಎಂದು ರಮೇಶ್ ಕಾಂಚನ್ ತಿಳಿಸಿ, ಎಸ್.ಪಿ. ಡಾ. ಅರುಣ್ ಅವರಿಗೆ ಹೂಗುಚ್ಛ ಮತ್ತು ಅಭಿನಂದನ ಪತ್ರ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಮುಖರಾದ ಪ್ರಸಾದ್ ರಾಜ್ ಕಾಂಚನ್, ಪ್ರಖ್ಯಾತ್ ಶೆಟ್ಟಿ, ಕುಶಲ್ ಶೆಟ್ಟಿ, ಗಣೇಶ್ ನೆರ್ಗಿ, ಚಂದ್ರಮೋಹನ್ ಚಿಟ್ಪಾಡಿ, ಶರತ್ ಶೆಟ್ಟಿ, ಮಮತಾ ಶೆಟ್ಟಿ, ಸೌರಭ್ ಬಲ್ಲಾಳ್, ಶ್ರೀನಿವಾಸ್ ಹೆಬ್ಬಾರ್, ಕೃಷ್ಣ ಹೆಬ್ಬಾರ್, ಯತೀಶ್ ಕರ್ಕೇರ, ನಾಸಿರ್ ಯಾಕೂಬ್, ಶೇಖ್ ವಾಹಿದ್, ಹಸನ್ ಸಾಹೇಬ್, ತುಳಸಿದಾಸ್, ನವೀನ್ ಶೆಟ್ಟಿ, ಸತೀಶ್ ಕೊಡವೂರು, ಆನಂದ ಪೂಜಾರಿ, ಧನಂಜಯ ಕುಂದರ್, ಸುರೇಂದ್ರ ಆಚಾರ್ಯ, ಸುಮನಾ ಆಚಾರ್ಯ, ಅರ್ಚನಾ ದೇವಾಡಿಗ, ಶಾಲಿನಿ ಸಾಲ್ಯಾನ್, ನಾಗರಾಜ್ ಭಟ್, ಸಂಜಯ್ ಆಚಾರ್ಯ ಮೊದಲಾದವರಿದ್ದರು.