-->
Dasimaiah: ಆದ್ಯ ವಚನಕಾರ ದೇವರ ದಾಸಿಮಯ್ಯ

Dasimaiah: ಆದ್ಯ ವಚನಕಾರ ದೇವರ ದಾಸಿಮಯ್ಯ

ವಚನ ಸಾಹಿತ್ಯದ ಪ್ರವರ್ತಕ ದೇವರ ದಾಸಿಮಯ್ಯ ಅಥವಾ ಜೇಡರ ದಾಸಿಮಯ್ಯ ಕಲ್ಯಾಣಿ ಚಾಲುಕ್ಯ ದೊರೆ ಎರಡನೇ ಜಯಸಿಂಹ (ಕ್ರಿ.ಶ. 1015- 43)ನ ಆಳ್ವಿಕೆಯ ಕಾಲದವನು.ದೇವಾಂಗ ಸಮುದಾಯಕ್ಕೆ ಸೇರಿದ ಅವರನ್ನು ಆ ಸಮುದಾಯ ಅವತಾರ ಪುರುಷನಾದ ದೇವಾಂಗ ಗಣೇಶ್ವರನ ಅವತಾರ ಎಂದೇ ಪರಿಗಣಿಸುತ್ತದೆ.


ದಾಸಿಮಯ್ಯ, ಬಸವಣ್ಣನಿಗಿಂತ ಸುಮಾರು 100ರಿಂದ 150 ವರ್ಷಗಳ ಹಿಂದೆ ವಾಸಿಸುತ್ತಿದ್ದ.


ದಾಸಿಮಯ್ಯ ವೀರಶೈವ ಧರ್ಮದ ಕಟ್ಟಾ ಅನುಯಾಯಿ.


ಕರ್ನಾಟಕದ ಕಲ್ಬುರ್ಗಿ ಮತ್ತು ಈಗಿನ ವಿಜಯಪುರ (ಬಿಜಾಪುರ) ಜಿಲ್ಲೆಗಳಲ್ಲಿ ವೀರಶೈವ ಧರ್ಮದ ಪ್ರತಿಪಾದಕನೂ ಪ್ರಚಾರಕನೂ ಆಗಿದ್ದ.


ದಾಸಿಮಯ್ಯನನ್ನು ಮೊದಲ ವಚನಕಾರ ಅಥವಾ ಸಂಯೋಜಕ ಎಂದು ಪರಿಗಣಿಸಲಾಗಿದೆ.


ಜೇಡರ ದಾಸಿಮಯ್ಯ ಒಬ್ಬ ಶ್ರೇಷ್ಠ ಶಿವಶರಣ, ಆದ್ಯ ವಚನಕಾರ. ಸುಮಾರು 176 ವಚನಗಳನ್ನು ಸರಳವಾದ ಪದಗಳಿಂದ ಸೃಷ್ಟಿಸಿದ್ದಾನೆ. ಆತನ ವಚನಗಳಲ್ಲಿ ಆ ಕಾಲದ ಸಾಮಾಜಿಕ ಸಂಗತಿಗಳನ್ನು  ಹೇರಳವಾಗಿ ಪ್ರಸ್ತಾಪಿಸಲಾಗಿದೆ.


ಆತ ಶ್ರೇಷ್ಠ ಚಿಂತಕ, ಅನುಭಾವಿ, ವಿಡಂಬನಕಾರ. ಅವನ ವಚನಗಳ ಕಾವ್ಯಮೌಲ್ಯ ವಿಶಿಷ್ಟವಾಗಿದೆ. ದಾಸಿಮಯ್ಯನ ವಚನಗಳ ಅಂಕಿತ ರಾಮನಾಥ.


ಬಸವ, ಅಲ್ಲಮ ಪ್ರಭು ಮತ್ತು ಸರ್ವಜ್ಞ ಸೇರಿದಂತೆ ವಚನಗಳ ಇತರ ಎಲ್ಲಾ ಸಂಯೋಜಕರು ದಾಸಿಮಯ್ಯನ ವಚನಗಳ ಶೈಲಿಯಿಂದ ಪ್ರಭಾವಿತರಾಗಿದ್ದಾರೆ.


ಕಾಯಕವೇ ಕೈಲಾಸ ಎಂದು ಬಗೆದು ದಾಸಿಮಯ್ಯ, ನೇಯ್ಗೆ ವೃತ್ತಿಯನ್ನು ಬಹುವಾಗಿ ಪ್ರೀತಿಸಿದಾತ. ಸೀರೆ ನೇಯ್ಗೆಯ ಕಾಯಕ ಮಾಡುತ್ತಾ ಅನೇಕ ಪವಾಡಗಳನ್ನು ಸೃಷ್ಟಿಸಿದ್ದಾನೆ.


ನೇಯ್ಗೆಯ ಸಾಧನಗಳನ್ನು ವಿವರಿಸಿ ಜೇಡರ ದಾಸಿಮಯ್ಯನ ಒಂದು ವಚನ ಹೀಗಿದೆ.

ಉಂಕೆಯ ನಿಗುಚಿ ಸರಿಗೆಯ ಸಮಗೊಳಿಸಿ
ಸಮಗಾಲನಿಕ್ಕಿ ಅಣಿಯೇಳ ಮುಟ್ಟದೆ
ಹಿಡಿದ ಲಾಳಿಯ ಮುಳ್ಳು ಕಂಡಿಕೆಯ ನುಂಗಿತ್ತು.
ಈ ಸೀರೆಯ ನೆಯ್ದವ ನಾನೊ ನೀನೋ? ರಾಮನಾಥ

-✍️ಸುಬ್ರಹ್ಮಣ್ಯ ಬಾಸ್ರಿ, ಉಡುಪಿ

Ads on article

Advertise in articles 1

advertising articles 2

Advertise under the article