-->
Yakshagana: ಸಂಸ್ಕಾರ ನೀಡುವ ಯಕ್ಷಗಾನ ಕಲಾವಿದರ ಗೌರವ ಅಭಿನಂದನೀಯ

Yakshagana: ಸಂಸ್ಕಾರ ನೀಡುವ ಯಕ್ಷಗಾನ ಕಲಾವಿದರ ಗೌರವ ಅಭಿನಂದನೀಯ

ಕಟೀಲು, ನ.18 (ಲೋಕಬಂಧು ವಾರ್ತೆ): ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸರಸ್ವತೀ ಸದನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಶಿರಸಿಯ ಯಕ್ಷ ಶಾಲ್ಮಲಾ ಸಂಸ್ಥೆ ಹಾಗೂ ಯಕ್ಷಗಾನ ರಂಗದಲ್ಲಿ ಅನನ್ಯ ಸಾಧನೆಗೈದ 22 ಮಂದಿ ಕಲಾವಿದರಿಗೆ ಉಡುಪಿ ಯಕ್ಷಗಾನ ಕಲಾರಂಗ ನೀಡುವ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿಜಯಕುಮಾರ್ ಮುದ್ರಾಡಿ ಅವರಿಗೆ ಯಕ್ಷಚೇತನ ಪ್ರಶಸ್ತಿ, ಚಿದಂಬರಬಾಬು ಕೋಣಂದೂರು, ಕೋಟ ಗೋವಿಂದ ಉರಾಳ, ಮುಂಡ್ಕೂರು ವಸಂತ ಶೆಟ್ಟಿ, ತೀರ್ಥಹಳ್ಳಿ ಶಿವಶಂಕರ ಭಟ್, ಸಿದ್ಧಾಪುರ ಸಂಜೀವ ಕೊಠಾರಿ, ಸೀತೂರು ಅನಂತಪದ್ಮನಾಭ ರಾವ್,ಕವ್ವಾಳೆ ಗಣಪತಿ ರಾಮಚಂದ್ರ ಭಾಗ್ವತ್, ಮಂದಾರ್ತಿ ರಘುರಾಮ ಮಡಿವಾಳ, ಕೋಡಿ ವಿಶ್ವನಾಥ ಗಾಣಿಗ, ಸಿದ್ಧಾಪುರ ಅಶೋಕ್ ಭಟ್. ಗುಣವಂತೆ ಸುಬ್ರಾಯ ನಾರಾಯಣ ಭಂಡಾರಿ, ಚೋರಾಡಿ ವಿಠಲ ಕುಲಾಲ್, ಎರ್ಮಾಳು ವಾಸುದೇವ ರಾವ್, ಈಚಲಕೊಪ್ಪ ಪ್ರಭಾಕರ ಹೆಗಡೆ, ಮಧೂರು ರಾಧಾಕೃಷ್ಣ ನಾವಡ, ಪಡುಬಿದ್ರೆ ರತ್ನಾಕರ ಆಚಾರ್ಯ, ಗುಂಡಿಮಜಲು ಗೋಪಾಲ ಭಟ್, ಇಡುವಾಣಿ ತ್ರ್ಯಂಬಕ ಹೆಗಡೆ, ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್, ಕಾಯರ್ತಡ್ಕ ವಸಂತ ಗೌಡ, ಶ್ರೀಧರ ಪಂಜಾಜೆ ಅವರನ್ನು ತಲಾ 20 ಸಾವಿರ ರೂ. ಹಾಗೂ ಫಲಕ ನೀಡಿ ಸನ್ಮಾನಿಸಲಾಯಿತು.


ಶ್ರೀ ಸ್ವರ್ಣವಲ್ಲೀ ಮಠದ ಕೃಪಾಶ್ರಯದ ಯಕ್ಷ ಶಾಲ್ಮಲಾ ಸಂಸ್ಥೆಗೆ ಶ್ರೀ ವಿಶ್ವೇಶತೀರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ  50 ಸಾವಿರ ರೂ. ಮತ್ತು ಫಲಕ ನೀಡಿ ಗೌರವಿಸಲಾಯಿತು.


ಇತ್ತೀಚಿಗೆ ನಿಧನರಾದ ಸಿಗಂದೂರು ಮೇಳದ ಭಾಗವತ  ರಾಮಚಂದ್ರ ನಾಯಕ್ ಅವರ ಕುಟುಂಬಿಕರಿಗೆ 50 ಸಾವಿರ ಸಾಂತ್ವನ ನಿಧಿ ನೀಡಲಾಯಿತು.


ಕಟೀಲು ದೇಗುಲದ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ. ಕಮಲಾದೇವಿಪ್ರಸಾದ ಆಸ್ರಣ್ಣ ಮತ್ತು ಶ್ರೀಹರಿನಾರಾಯಣದಾಸ ಆಸ್ರಣ್ಣ ಹಾಗೂ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ ಅವರನ್ನು ಗೌರವಿಸಲಾಯಿತು.


ಸುವರ್ಣ ಪ್ರತಿಷ್ಠಾನದ ಪ್ರಭಾಕರ ಸುವರ್ಣ. ಲೀಲಾಕ್ಷ ಕರ್ಕೇರ, ಎಂ.ಕೆ. ಭಟ್. ಕೆ. ಸದಾಶಿವ ಭಟ್ ಮೊದಲಾದವರಿದ್ದರು.


ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿ, ವಂದಿಸಿದರು.


ಉಡುಪಿ ಯಕ್ಷ ಶಿಕ್ಷಣ ಟ್ರಸ್ಟ್ ವಿದ್ಯಾರ್ಥಿಗಳಿಂದ ಶಶಿಪ್ರಭಾ ಪರಿಣಯ ಬಡಗುತಿಟ್ಟು ಯಕ್ಷಗಾನ, ಯಕ್ಷಗಾನ ರಾಗ ಸಂಯೋಗ ತೆಂಕು ಬಡಗು ಕರ್ನಾಟಕ ಶಾಸ್ತ್ರಿಯ ಸಂಗೀತ ಸಮಾನ ಸಾಹಿತ್ಯವರಾಗ ಪ್ರಸ್ತುತಿ ಹಾಗೂ ತೆಂಕುತಿಟ್ಟಿನ  ಯಕ್ಷಗಾನ ಕಲಾವಿದರಿಂದ ಯಕ್ಷಗಾನ ರೂಪಕ ಶ್ರೀ ಮನೋಹರ ಸ್ವಾಮಿ ಪರಾಕು ಪ್ರದರ್ಶನಗೊಂಡಿತು.

Ads on article

Advertise in articles 1

advertising articles 2

Advertise under the article