-->
ನೇಜಾರು ಪ್ರಕರಣ ಸಂಭ್ರಮಿಸಿದ 'ಹಿಂದೂಮಂತ್ರ' ಇನ್ಸ್ಟ್ರಾಗ್ರಮ್: ಕೇಸು ದಾಖಲು

ನೇಜಾರು ಪ್ರಕರಣ ಸಂಭ್ರಮಿಸಿದ 'ಹಿಂದೂಮಂತ್ರ' ಇನ್ಸ್ಟ್ರಾಗ್ರಮ್: ಕೇಸು ದಾಖಲು

ಉಡುಪಿ, ನ.16 (ಲೋಕಬಂಧು ವಾರ್ತೆ): ರಾಜ್ಯವನ್ನೇ ಬೆಚ್ಚಿ ಬೀಳಿಸಿದ ನೇಜಾರಿನ ಒಂದೇ ಕುಟುಂಬದ ನಾಲ್ವರ ಅಮಾನುಷ ಹತ್ಯೆಗೆ ಕಿಡಿಗೇಡಿ ಹಿಂದುತ್ವವಾದಿಗಳು ಸಂಭ್ರಮಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶ ಹರಿಬಿಟ್ಟು ಆತಂಕ ಸೃಷ್ಟಿಸಿದ್ದಾರೆ.
ನ.12ರಂದು ನೇಜಾರಿನಲ್ಲಿ ನಡೆದ ತಾಯಿ ಮತ್ತು ಮೂವರು ಮಕ್ಕಳ ಕಗ್ಗೊಲೆಗೆ ಜಾತಿ ಭೇದ ಮರೆತು ಎಲ್ಲರೂ ಮರುಗುತ್ತಿರುವಾಗ ಸಾಮಾಜಿಕ ಜಾಲತಾಣ ಇನ್ಸ್ಟ್ರಾಗ್ರಾಮ್ ನಲ್ಲಿ 'ಹಿಂದು ಮಂತ್ರ' ಎಂಬ ಪೇಜ್‌ನಲ್ಲಿ ಕೊಲೆ ಆರೋಪಿಯನ್ನು ಸಾಧಕನಂತೆ ಬಿಂಬಿಸಲಾಗಿದೆ.

ಹಿಂದು ಮಂತ್ರ (Hindu Mantra) ಎಂಬ ಇನ್ಸ್ಟ್ರಾಗ್ರಾಮ್ ಪುಟದಲ್ಲಿ ಈ ಬಗ್ಗೆ 'ಸ್ಟೋರಿ' ಹಾಕಲಾಗಿದ್ದು, '15 ನಿಮಿಷದಲ್ಲಿ 4 ಮುಸ್ಲಿಮರನ್ನು ಕೊಂದು ವಿಶ್ವ ದಾಖಲೆ ನಿರ್ಮಿಸಿದ್ದಾನೆ' ಎಂಬ ಶೀರ್ಷಿಕೆ ನೀಡಲಾಗಿದೆ. ಅಲ್ಲದೆ, ಆರೋಪಿ ಪ್ರವೀಣ್ ಅರುಣ್ ಚೌಗಲೆ ಫೋಟೋಗೆ 'ಕಿರೀಟ' ತೊಡಿಸಿ ವಿಕೃತಿ ಮೆರೆಯಲಾಗಿದೆ.

ತಮ್ಮ ಕೃತ್ಯವನ್ಬು ಸಮರ್ಥಿಸಿಕೊಂಡಿರುವ ಕಿಡಿಗೇಡಿಗಳು 'ಉಡುಪಿ ಹುಡುಗಿಯರ ವಿಚಾರದಲ್ಲಿ ಯಾರೂ ಬಂದಿಲ್ಲ. ಆದ್ದರಿಂದ ನಾವೂ ಈ ವಿಚಾರಕ್ಕೆ ಬರುವುದಿಲ್ಲ' ಎಂದು ಬರೆಯಲಾಗಿದೆ.

ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೊಮೊಟೊ ಕೇಸು ದಾಖಲಿಸಿಕೊಳ್ಳಲಾಗಿದೆ ಎಂದು ಎಸ್.ಪಿ. ಡಾ. ಕೆ. ಅರುಣ್ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article