Allamaprabhu: ವಚನಚಂದ್ರಮ ಪ್ರಭು ಅಲ್ಲಮ
Friday, November 17, 2023
ಆತನ ತಾಯಿ ಸುಜ್ಞಾನಿ ಮತ್ತು ತಂದೆ ನಿರಾಶಂಕರ. ಕಾಮಲತೆಯನ್ನು ಮದುವೆಯಾದ ಅಲ್ಲಮ, ಮಡದಿಯ ಅಕಾಲ ನಿಧನದ ನಂತರ ಮಾನಸಿಕ ಸ್ವಾಸ್ಥ್ಯವನ್ನೇ ಕಳೆದುಕೊಂಡ.
ಮತಿ ಭ್ರಮಣೆಯಿಂದ ಅಲೆಯುತ್ತಿರುವಾಗ ಗುಹೆಯೊಂದರಲ್ಲಿ ಯೋಗಿ ಅನಿಮಿಷ ದೇವ ಗುರುವಿನ ದರ್ಶನವಾಗುತ್ತದೆ. ಆ ಗುರು ಅಲ್ಲಮನಿಗೆ ಒಂದು ಲಿಂಗವೊಂದನ್ನು ನೀಡಿ, ತನ್ನೆಲ್ಲಾ ಜ್ಞಾನವನ್ನು ಧಾರೆಯೆರೆಯುತ್ತಾನೆ.
ಅಲ್ಲಮನಿಗೆ ಜ್ಞಾನೋದಯವಾಗಿ ಅಲ್ಲಮಪ್ರಭುವಾಗಿ ಬದಲಾಗುತ್ತಾನೆ.
ಬಸವಣ್ಣನ ನೇತೃತ್ವದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕ್ರಾಂತಿಯ ಪ್ರಭಾವದಿಂದ ನೂರಾರು ಶರಣರು ನಾಡಿನ ವಿವಿಧ ಭಾಗಗಳಿಂದ ಕಲ್ಯಾಣ ಪಟ್ಟಣದಲ್ಲಿ ಸೇರಿದ್ದರು.
ಕಳಚುರಿ ಬಿಜ್ಜಳನ ಬಳಿ ದಂಡಾಧೀಶನಾಗಿದ್ದ ಬಸವಣ್ಣನ ಮಾರ್ಗದರ್ಶನದಲ್ಲಿ ಸ್ವತಂತ್ರ ವಿಚಾರಮಥನದಿಂದ ಅಲ್ಲಮಪ್ರಭು, ಜನತೆಯಲ್ಲಿ ಹೊಸ ಚೈತನ್ಯವನ್ನು ತುಂಬಿದ್ದ. ಆ ಶರಣರ ಅನುಭಾವ ಗೋಷ್ಠಿಯಲ್ಲಿ ವಿಚಾರ ಮಥನದ ಅಗ್ರಪೀಠ ವಹಿಸಿದ್ದ ಮಹಾವ್ಯಕ್ತಿ ಅಲ್ಲಮಪ್ರಭು.
ಬಸವಣ್ಣನವರ ವಿಚಾರ ಕ್ರಾಂತಿಗೆ ಬೆನ್ನೆಲುಬಾಗಿ ನಿಂತು, ತನ್ನ ಜ್ಞಾನ ವೈರಾಗ್ಯಗಳ ಕಾಂತಿಯನ್ನಿತ್ತು ಅದನ್ನು ಮುನ್ನಡೆಸಿದಾತ ಪ್ರಭು ಅಲ್ಲಮ. ಬಸವ- ಅಲ್ಲಮರಿಬ್ಬರೂ ಆ ಯುಗದ ಮಹಾಶಕ್ತಿಗಳಾಗಿ ಹೊರಹೊಮ್ಮಿದ್ದರು.
ಅಲ್ಲಮ ತನ್ನ ವೈಶಿಷ್ಟ್ಯಪೂರ್ಣ ರೂಪಕ ಭಾಷೆಯಲ್ಲಿ ರಚಿಸಿದ ವಚನ ಚಂದ್ರಿಕೆಯಲ್ಲಿ 1,294 ವಚನಗಳು ಲಭ್ಯವಾಗಿವೆ.
ಅಲ್ಲಮಪ್ರಭು ತನ್ನ ಕೊನೆಯ ದಿನಗಳಲ್ಲಿ ಶ್ರೀಶೈಲಕ್ಕೆ ಹೋಗಿ ಶಿವೈಕ್ಯನಾದ ಎಂಬ ಪ್ರತೀತಿ ಇದೆ.
ಅಲ್ಲಮ ಪ್ರಭುವಿನ ವಚನಗಳ ಅಂಕಿತನಾಮ ಗುಹೇಶ್ವರ ಅಥವಾ ಗೊಹೇಶ್ವರ. ಆತನ ವಚನಗಳಲ್ಲಿ ಗಹನವಾದ ಆಧ್ಯಾತ್ಮ ಹಾಗೂ ತಾತ್ವಿಕ ವಿಚಾರಧಾರೆಗಳಿವೆ.
ಅತ್ಯಂತ ನೇರ ಮತ್ತು ನಿಷ್ಠುರವಾದಿಯಾಗಿದ್ದ ಅಲ್ಲಮ ಪ್ತಭು ಅನೇಕ ಶಿವಶರಣ- ಶರಣೆಯರಿಗೆ ಭಕ್ತಿ ವೈರಾಗ್ಯ ಬೋಧಿಸಿದ. ಕನ್ನಡ ಭಾಷೆಯಲ್ಲಿಯೇ ತನ್ನ ವಚನಗಳ ಮೂಲಕ ಧಾರ್ಮಿಕ ಹಾಗೂ ಸಾಮಾಜಿಕ ಕ್ರಾಂತಿ ಮಾಡಿದ.