-->
Kalyanpura: ಕಲ್ಯಾಣಪುರ: ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ

Kalyanpura: ಕಲ್ಯಾಣಪುರ: ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ

ಉಡುಪಿ, ನ.11 (ಲೋಕಬಂಧು ವಾರ್ತೆ): ಉಡುಪಿ ವಿಧಾನಸಭಾ ಕ್ಷೇತ್ರದ ಕಲ್ಯಾಣಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗರಿಕರ ಬಹುದಿನಗಳ ಬೇಡಿಕೆಯಾಗಿದ್ದ ಭಾರತ್ ಗ್ಯಾಸ್ ಗೋಡೌನ್ ನಿಂದ ತೋನ್ಸೆ ಮನೋಹರ್ ಶೆಟ್ಟಿ ಮನೆಗೆ ಹೋಗುವ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕ ಯಶಪಾಲ್ ಎ. ಸುವರ್ಣ ಶನಿವಾರ ನೆರವೇರಿಸಿದರು.ಈ ಸಂದರ್ಭದಲ್ಲಿ ಕಲ್ಯಾಣಪುರ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷೆ ಪ್ರೇಮಲತಾ ಕಿಶೋರ್, ನಿಕಟಪೂರ್ವ ಅಧ್ಯಕ್ಷ ಕೃಷ್ಣ ದೇವಾಡಿಗ, ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸತೀಶ್ ನಾಯ್ಕ್, ಗ್ರಾಮ ಪಂಚಾಯತ್ ಸದಸ್ಯರಾದ ಉದಯ ಪೂಜಾರಿ ಪ್ರಶಾಂತ್ ಆಚಾರ್ಯ, ಜಾನ್ಸನ್, ಕವಿತಾ ಮೇಸ್ತ ಮತ್ತು ಅನಿತಾ ನಾಯ್ಕ್, ಪ್ರಮುಖರಾದ ಮನೋಹರ್ ಶೆಟ್ಟಿ ತೋನ್ಸೆ, ಅಮಿತ್ ಪೂಜಾರಿ, ದಿನಕರ ಮಾಸ್ಟರ್, ಸತೀಶ್ ಶೆಟ್ಟಿ ಕೆಮ್ಮಣ್ಣು, ಸುನಿಲ್ ನೇಜಾರ್, ಗ್ರಾಮ ಪಂಚಾಯತ್ ಮಾಜಿ ಸದಸ್ಯರು, ಪಕ್ಷ ಕಾರ್ಯಕರ್ತರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article