Tulasi Sankeerthane: ಕೃಷ್ಣಮಠದಲ್ಲಿ ತುಳಸಿ ಸಂಕೀರ್ತನೆ ಆರಂಭ
Wednesday, November 15, 2023
ಉಡುಪಿ, ನ.15 (ಲೋಕಬಂಧು ವಾರ್ತೆ): ಇಲ್ಲಿನ ಶ್ರೀಕೃಷ್ಣ ಮಠದಲ್ಲಿ ಪ್ರತಿವರ್ಷ ಕಾರ್ತೀಕ ಮಾಸದಲ್ಲಿ ನಡೆಯುವ ತುಳಸಿ ಸಂಕೀರ್ತನೆ ಮಂಗಳವಾರ ಆರಂಭಗೊಂಡಿತು.ತುಳಸಿ ಸಂಕೀರ್ತನೆ ಉತ್ಥಾನ ದ್ವಾದಶಿ ತುಳಸಿ ಪೂಜೆ (ಕ್ಷೀರಾಬ್ದಿ) ವರೆಗೆ ಪ್ರತಿದಿನ ರಾತ್ರಿ ಮುನ್ನಡೆಯಲಿದೆ. ಬುಧವಾರ ನಡೆದ ತುಳಸಿ ಸಂಕೋರ್ತನೆಯಲ್ಲಿ ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ತುಳಸಿ ಪೂಜೆ ನೆರವೇರಿಸಿದರು.ನಂತರ ತುಳಸಿ ಸಂಕೀರ್ತನೆ ನಡೆಯಿತು.
ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.