
Canara Bank: ಪುತ್ತಿಗೆ ಪರ್ಯಾಯೋತ್ಸವ: ಕೆನರಾ ಬ್ಯಾಂಕಿಗೆ ಮನವಿ
Wednesday, November 15, 2023
ಉಡುಪಿ, ನ.15 (ಲೋಕಬಂಧು ವಾರ್ತೆ): ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯ ಮಹೋತ್ಸವವನ್ನು ವೈಭೋವೋಪೇತವಾಗಿ ನಡೆಸಲು ಸಹಕರಿಸುವಂತೆ ಕೆನರಾ ಬ್ಯಾಂಕಿನ ಆಡಳಿತ ನಿರ್ದೇಶಕ ಕೆ. ಸತ್ಯನಾರಾಯಣ ರಾಜು ಅವರಿಗೆ ಪುತ್ತಿಗೆ ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಎಚ್. ಎಸ್. ಬಲ್ಲಾಳ್ ಆರ್ಥಿಕ ಸಹಕಾರಕ್ಕಾಗಿ ಮನವಿ ಸಲ್ಲಿಸಿದರು.
ಮನವಿಗೆ ಸ್ಪಂದಿಸಿದ ಸತ್ಯನಾರಾಯಣ ರಾಜು, ಪುತ್ತಿಗೆ ಪರ್ಯಾಯಕ್ಕೆ ತಮ್ಮ ಸಂಸ್ಥೆಯಿಂದ ಸರ್ವ ಸಹಕಾರ ನೀಡಲಾಗುವುದು ಎಂದರು.
ಶ್ರೀಮಠದ ದಿವಾನ ನಾಗರಾಜ ಆಚಾರ್ಯ, ಕೋಶಾಧಿಕಾರಿ ರಂಜನ್ ಕಲ್ಕೂರ, ಸಂಚಾಲಕರಾದ ಜಯಕರ ಶೆಟ್ಟಿ ಇಂದ್ರಾಳಿ ಮತ್ತು ರಮೇಶ್ ಭಟ್ ಕೆ., ಸಮಿತಿ ಸದಸ್ಯರಾದ ರವೀಂದ್ರ ಆಚಾರ್ಯ, ಉಮೇಶ್ ಭಟ್ ಹಾಗೂ ಬ್ಯಾಂಕಿನ ಅಧಿಕಾರಿಗಳಾದ ಎಂ. ಜಿ .ಪಂಡಿತ್, ವಿನೋದ್ ವಿಷ್ಣು ಜೋಶಿ, ರಾಜೀವ್ ತುಕ್ರಾಲ್, ರವಿ ಪ್ರಸಾದ್ ಭಟ್ ಇದ್ದರು.