.jpg)
ಜು. 20: ಸಂಪಿಗೆಯಲ್ಲಿ ಧಾರೇಶ್ವರ ಅನುಸ್ಮೃತಿ, ಶ್ರೀಧರ ರಾವ್ ನುಡಿ ನಮನ
Friday, July 19, 2024
ಜು. 20: ಸಂಪಿಗೆಯಲ್ಲಿ ಧಾರೇಶ್ವರ ಅನುಸ್ಮೃತಿ, ಶ್ರೀಧರ ರಾವ್ ನುಡಿ ನಮನ
ಲೋಕಬಂಧುನ್ಯೂಸ್ ಡೆಸ್ಕ್, ಮೂಡುಬಿದಿರೆ
ಆಮ್ನಾಯ ಯಕ್ಷ ಸಂಸ್ಕೃತಿ ಬಳಗ ಗಾಳಿಮನೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಇಲ್ಲಿಗೆ ಸಮೀಪದ ಸಂಪಿಗೆ ಶ್ರೀ ದುರ್ಗಾ ಜ್ಯೋತಿಷ್ಯಾಲಯದಂಗಳದಲ್ಲಿ ಜುಲೈ 20ರಂದು ಅಪರಾಹ್ನ 2 ಗಂಟೆಗೆ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅನುಸ್ಮೃತಿ ಮತ್ತು ಕುಂಬ್ಳೆ ಶ್ರೀಧರ ರಾವ್ ನುಡಿನಮನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಡಾ| ಎಂ. ಪ್ರಭಾಕರ ಜೋಶಿ ಅವರು ಧಾರೇಶ್ವರ ಅನುಸ್ಮೃತಿ ಮತ್ತು ಆಮ್ನಾಯ ಸ್ಥಾಪಕಾಧ್ಯಕ್ಷ ಡಾ| ವಿನಾಯಕ ಭಟ್ಟ ಗಾಳಿಮನೆ ಅವರು ಶ್ರೀಧರ ರಾವ್ ನುಡಿನಮನ ನಡೆಸಿಕೊಡಲಿದ್ದಾರೆ.
ಸಂಸದ ಕ್ಯಾ| ಬೃಜೇಶ್ ಚೌಟ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ, ಉದ್ಯಮಿ ಶ್ರೀಪತಿ ಭಟ್, ಎಂಸಿಎಸ್ ಸೊಸೈಟಿ ವಿಶೇಷ ಸಿಇಒ ಚಂದ್ರಶೇಖರ ಎಂ., ಯಕ್ಷಗಾನ ಕವಿ ಚಾರ ಪ್ರದೀಪ ಹೆಬ್ಬಾರ್, ಡಾ| ಯೋಗಿ ಪಿ. ಸುಧಾಕರ ತಂತ್ರಿ ಭಾಗವಹಿಸಲಿದ್ದಾರೆ.
ಅಪರಾಹ್ನ 2ರಿಂದ ಕವಿರತ್ನ ಕಾಳಿದಾಸ ಯಕ್ಷಗಾನ ತಾಳಮದ್ದಳೆ ಆಯೋಜಿಸಲಾಗಿದೆ.
ಕಲಾವಿದರಾಗಿ ಹಿಮ್ಮೇಳದಲ್ಲಿ ಶಿವಶಂಕರ ಭಟ್ಟ ಹರಿಹರಪುರ, ರಾಘವೇಂದ್ರ ಹೆಗಡೆ ಯಲ್ಲಾಪುರ ಮತ್ತು ಶಿವಾನಂದ ಕೋಟ, ಅರ್ಥದಾರಿಗಳಾಗಿ ಡಾ| ಪ್ರಭಾಕರ ಜೋಶಿ, ಯೋಗಿ ಸುಧಾಕರ ತಂತ್ರಿ, ವೆಂಕಟರಮಣ ಕೆರೆಗದ್ದೆ, ವಿನಾಯಕ ಭಟ್ಟ ಗಾಳಿಮನೆ, ಕೃಷ್ಣಮೂರ್ತಿ ಮಾಯಣ, ಸದಾಶಿವ ರಾವ್ ನೆಲ್ಲಿಮಾರ್, ಚಾರ ಪ್ರದೀಪ ಹೆಬ್ಬಾರ್ ಭಾಗವಹಿಸುವರು.