ಅನುದಾನ ನೀಡುವಲ್ಲಿ ತಾರತಮ್ಯ
Wednesday, July 24, 2024
ಅನುದಾನ ನೀಡುವಲ್ಲಿ ತಾರತಮ್ಯ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಅಭಿವೃದ್ಧಿ ಯೋಜನೆಗಳ ಅನುದಾನ ನೀಡುವಲ್ಲಿ ತಾರತಮ್ಯ ತಳೆಯಲಾಗಿದೆ. ಹೆಚ್ಚಿನ ತೆರಿಗೆ ಪಾವತಿಸುವ ಕರ್ನಾಟಕಕ್ಕೆ ಯಾವುದೇ ಯೋಜನೆಗಳ ಘೋಷಣೆ ಇಲ್ಲ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರು ತಿಳಿಸಿದ್ದಾರೆ.
ಬಿಹಾರ ಹಾಗೂ ಆಂಧ್ರಪ್ರದೇಶಗಳಿಗೆ ವಿಶೇಷ ಅನುದಾನ ಬಿಡುಗಡೆಗೊಳಿಸಿ ಮಿತ್ರಕೂಟದ ಓಲೈಕೆಗೆ ಬಜೆಟ್ ನ್ನು ಸೀಮಿತಗೊಳಿಸಲಾಗಿದೆ ಎಂದು ಭಾಸ್ಕರ ರಾವ್ ತಿಳಿಸಿದ್ದಾರೆ.