ವಿಕಸಿತ ಭಾರತಕ್ಕೆ ಪೂರಕ ಬಜೆಟ್
Wednesday, July 24, 2024
ವಿಕಸಿತ ಭಾರತಕ್ಕೆ ಪೂರಕ ಬಜೆಟ್
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಯುವ ಜನತೆ, ಮಹಿಳೆಯರಿಗೆ ಈ ಬಾರಿಯ ಬಜೆಟ್ ಬಂಪರ್ ಕೊಡುಗೆ ನೀಡಿದೆ. ಮುದ್ರಾ ಯೋಜನೆಯ ಮಿತಿಯನ್ನು ಗರಿಷ್ಠ 10 ಲಕ್ಷದಿಂದ 20 ಲಕ್ಷ ರೂ. ವರೆಗೆ ಏರಿಸಿರುವುದು ಸ್ವಂತ ಉದ್ಯೋಗ ಮಾಡುವವರಿಗೆ ತುಂಬಾ ಆಶಾದಾಯಕವಾಗಿದೆ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಆದಾಯ ತೆರಿಗೆ ಮಿತಿ ಏರಿಸಿರುವುದು ಮಧ್ಯಮ ವರ್ಗದವರಿಗೆ ತುಂಬಾ ಅನುಕೂಲವಾಗಲಿದೆ.
ಕೃಷಿ ವಲಕ್ಕೆ 1.52 ಲಕ್ಷ ಕೋಟಿ ನೀಡಿರುವುದು ಸ್ವಾಗತಾರ್ಹ.
ವಿಶ್ವ ಮಟ್ಟದಲ್ಲಿ ಭಾರತ ಆರ್ಥಿಕವಾಗಿ ಬೆಳೆಯುವ ಸಂಕಲ್ಪಕ್ಕೆ ಪೂರಕ ಬಜೆಟ್ ಎಂದು ಉದಯಕುಮಾರ್ ವಿಶ್ಲೇಷಿಸಿದ್ದಾರೆ.
ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿ ಬಗ್ಗೆ ಒತ್ತುಕೊಟ್ಟಿರುವುದರಿಂದ ವಿಕಸಿತ ಭಾರತ ಸಂಕಲ್ಪಕ್ಕೆ ಪುಷ್ಠಿ ನೀಡಿದಂತಾಗಿದೆ.
ಒಟ್ಟಾರೆ ಈ ಬಜೆಟ್ ಆಶಾದಾಯಕ, ಅಭಿವೃದ್ಧಿ ಪರ ಮೋದಿ ಚಿಂತನೆಗೆ ಕೈಗನ್ನಡಿಯಾಗಿದೆ ಎಂದವರು ಹರ್ಷ ವ್ಯಕ್ತಪಡಿಸಿದ್ದಾರೆ.