ಕೃಷಿಗೆ ಒತ್ತುನೀಡದ ಬಜೆಟ್
Wednesday, July 24, 2024
ಕೃಷಿಗೆ ಒತ್ತುನೀಡದ ಬಜೆಟ್
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿದ ಬಜೆಟ್ ಎಲ್ಲಾ ರಂಗಗಳಿಗೂ ಸ್ಪರ್ಷಿಸಿದೆ. ಆದರೆ, ದೇಶದ ಮೂಲ ಆರ್ಥಿಕ ಬೆನ್ನೆಲುಬು ಎನಿಸಿಕೊಂಡ ಕೃಷಿ ಬಗ್ಗೆ ಹೆಚ್ಚು ಒತ್ತುಕೊಟ್ಟಿಲ್ಲ ಎಂದು ರಾಜಕೀಯ ವಿಶ್ಲೇಷಕ ಹಾಗೂ ವಿಶ್ರಾಂತ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ವಿಶ್ಲೇಷಿಸಿದ್ದಾರೆ.
ಬಜೆಟ್ ನ ಯಶಸ್ಸು ನಿಂತಿರುವುದು ಅದನ್ನು ಕಾರ್ಯಗತ ಮಾಡುವುದರ ಮೇಲೆ ಎನ್ನುವುದು ಅಷ್ಟೇ ಸತ್ಯ. ಹಿಂದಿನ ಸ್ಮಾರ್ಟ್ ಸಿಟಿ ಯೋಜನೆ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎನ್ನುವುದು ಇಂದಿಗೂ ಪ್ರಶ್ನೆಯಾಗಿ ಕಾಡುತ್ತಿದೆ.
ಈ ಬಾರಿಯ ಬಜೆಟ್‌ನಲ್ಲಿ ಸಮಿಶ್ರ ಸರಕಾರದ ಛಾಯೆ ಎದ್ದುಕಾಣುವಂತಿದೆ. ನಮ್ಮಲ್ಲಿ 28 ರಾಜ್ಯಗಳು, 8 ಕೇಂದ್ರಾಡಳಿತ ಪ್ರದೇಶಗಳು ಇವೆ. ಆದರೆ, ಬಿಹಾರ ಮತ್ತು ಆಂದ್ರಪ್ರದೇಶಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ.
ತೆರಿಗೆ ಸರಳಗೊಳಿಸಿರುವುದು ಉತ್ತಮ ನಿರ್ಣಯ. ಉದ್ಯೋಗ ಸೃಷ್ಟಿಗೆ ಅನುಕೂಲಕರ ಬಜೆಟ್ ಆದೀತೇ ಎಂಬುದನ್ನು ಕಾದು ನೋಡಬೇಕಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉತ್ತಮ ಹೊಂದಾಣಿಕೆಯಿಂದಷ್ಟೆ ಬಜೆಟ್ ನ ಪ್ರತಿಫಲ ಜನತೆಗೆ ಸಮರ್ಪಕವಾಗಿ ತಲುಪಲು ಸಾಧ್ಯ ಎಂದು ಸುರೇಂದ್ರನಾಥ ಶೆಟ್ಟಿ ತಿಳಿಸಿದ್ದಾರೆ.