ಯುವಜನರಿಗೆ ಆಶಾಕಿರಣ ಮೂಡಿಸುವ ಬಜೆಟ್
Wednesday, July 24, 2024
ಯುವಜನರಿಗೆ ಆಶಾಕಿರಣ ಮೂಡಿಸುವ ಬಜೆಟ್
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ವಿತ್ತಮಂತ್ರಿ ನಿರ್ಮಲಾ ಸೀತಾರಾಮನ್ ಮಂಡಿಸಿದ ಸಪ್ತಮ ಬಜೆಟ್ ಯುವಜನರ ಆಶಾಕಿರಣವಾಗಿ ಮೂಡಿಬಂದಿದೆ ಎಂದು ಯುವ ಸಂಘಟಕ ರಾಘವೇಂದ್ರ ಪ್ರಭು ಕರ್ವಾಲು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೌಶಲ್ಯಾಭಿವೃದ್ಧಿಗಾಗಿ 1.48 ಲಕ್ಷ ಕೋಟಿ ಮೀಸಲು, ನೂತನ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿರುವುದು ಸಂತೋಷದ ವಿಚಾರ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ 5 ವರ್ಷ ವಿಸ್ತರಣೆ, ಕೃಷಿ ಮತ್ತು ಕೃಷಿ ಸಂಬಂಧಿತ ವಲಯಕ್ಕೆ 1.52 ಲಕ್ಷ ಕೋಟಿ, 20 ಲಕ್ಷ ಯುವಕರಿಗೆ ಕೌಶಲ್ಯಾಭಿವೃದ್ಧಿ ಯೋಜನೆ, 1,000 ಕೈಗಾರಿಕಾ ತರಬೇತಿ ಕೇಂದ್ರಗಳ ಸ್ಥಾಪನೆ, ಮಹಿಳಾ ಉದ್ಯೋಗಿಗಳಿಗೆ ಹಾಸ್ಟೆಲ್ ನಿರ್ಮಾಣಕ್ಕೆ ಆದ್ಯತೆ,
ಉನ್ನತ ಶಿಕ್ಷಣಕ್ಕೆ10 ಲಕ್ಷ ವರೆಗೆ ಸಾಲ ಸೌಲಭ್ಯ, ಕೌಶಲ್ಯಾಭಿವೃದ್ಧಿ ತರಬೇತಿ ಸಾಲ 7.5 ಲಕ್ಷಕ್ಕೆ ಹೆಚ್ಚಳ,
1 ಲಕ್ಷ ವಿದ್ಯಾರ್ಥಿಗಳಿಗೆ ಇ-ವೋಚರ್ ನೀಡುವ ಯೋಜನೆ, 30 ಲಕ್ಷ ಯುವಕರಿಗೆ ಉದ್ಯೋಗ ಇತ್ಯಾದಿ ಬಜೆಟ್ ನಲ್ಲಿ ನೀಡಿರುವುದು ಉತ್ತಮ ಎಂದು ಕರ್ವಾಲು ವಿಶ್ಲೇಷಿಸಿದ್ದಾರೆ.