.jpg)
ಪೌರಾಯುಕ್ತರ ಭರವಸೆ: ರದ್ದುಗೊಂಡ ಪ್ರತಿಭಟನೆ
Wednesday, July 17, 2024
ಪೌರಾಯುಕ್ತರ ಭರವಸೆ: ರದ್ದುಗೊಂಡ ಪ್ರತಿಭಟನೆ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಬ್ರಹ್ಮಗಿರಿಯಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆ ವರೆಗಿನ ರಸ್ತೆ ದುರಸ್ತಿಗೆ ಆಗ್ರಹಿಸಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಸಂಚಾಲಕ ನಿತ್ಯಾನಂದ ಒಳಕಾಡು ಬುಧವಾರ ಆಯೋಜಿಸಿದ್ದ ಪ್ರತಿಭಟನೆ, ನಗರಸಭೆ
ಪೌರಾಯುಕ್ತ ನೀಡಿದ ಭರವಸೆಯಿಂದಾಗಿ ರದ್ದುಗೊಂಡಿತು.ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದ್ದಾಗ ಪೌರಾಯುಕ್ತ ರಾಯಪ್ಪ ಖುದ್ದು ಸ್ಥಳಕ್ಕೆ ಆಗಮಿಸಿ, ತೇಪೆ ಹಾಕುವ ಕಾಮಗಾರಿಗೆ ವ್ಯವಸ್ಥೆಗೊಳಿಸಿದರು.
ಮಳೆಗಾಲ ಮುಗಿದ ಬಳಿಕ ಮರು ಡಾಮರೀಕರಣಗೊಳಿಸುವ ಭರವಸೆ ನೀಡಿದರು.
ಅದರಿಂದಾಗಿ ಒಳಕಾಡು ಅವರು ಪ್ರತಿಭಟನೆ ರದ್ದುಗೊಳಿಸಿದರು.
ಕಾಮಗಾರಿ ನಡೆಸಿದ ಗುತ್ತಿಗೆದಾರರ ಎಲ್ಲಾ ಬಿಲ್ಗಳನ್ನು ತಡೆಹಿಡಿಯಲಾಗಿದೆ. ಮಳೆಗಾಲ ಮುಗಿದ ಬಳಿಕ ಈ ರಸ್ತೆಗೆ ಮರು ಡಾಮರೀಕರಣ ನಡೆಸಲಾಗುತ್ತದೆ ಎಂದು ಪೌರಾಯುಕ್ತ ರಾಯಪ್ಪ ತಿಳಿಸಿದರು.
ಪೌರಾಯುಕ್ತರ ತಕ್ಷಣದ ಸ್ಪಂದನೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಯಿತು.
ಈ ವರ್ಷದ ಬೇಸಿಗೆಯಲ್ಲಿ ಈ ರಸ್ತೆಗೆ ಡಾಮರೀಕರಣ ಮಾಡಲಾಗಿತ್ತು. ಕಳಪೆ ಗುಣಮಟ್ಟದ ಕಾಮಗಾರಿಯಿಂದಾಗಿ ರಸ್ತೆಗಳಲ್ಲಿ ಹೊಂಡಗಳು ಬಿದ್ದಿದ್ದವು. ವಾಹನಗಳು ಸಂಚರಿಸಲಾಗದ ಪರಿಸ್ಥಿತಿ ಎದುರಾಗಿತ್ತು.
ರಸ್ತೆ ಅಪಘಾತ ವಲಯವಾಗಿ ಮಾರ್ಪಟ್ಟಿತ್ತು.