ಸರ್ವ ಸ್ಪರ್ಶಿ, ದೂರದೃಷ್ಟಿಯ ಅಭಿವೃದ್ಧಿ ಪರ ಬಜೆಟ್
Wednesday, July 24, 2024
ಸರ್ವ ಸ್ಪರ್ಶಿ, ದೂರದೃಷ್ಟಿಯ ಅಭಿವೃದ್ಧಿ ಪರ ಬಜೆಟ್
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಕೇಂದ್ರ ವಿತ್ತ ಸಚಿವರು ಮಂಡಿಸಿದ 2024- 25ನೇ ಸಾಲಿನ ಬಜೆಟ್ ದೇಶವನ್ನು 2047ಕ್ಕೆ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ರೂಪಿಸುವಲ್ಲಿ ಕೊಟ್ಟಿರುವ ರೋಡ್ ಮ್ಯಾಪ್ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ.
ದೇಶದ ಆದ್ಯತೆಗಳನ್ನು 9 ಕ್ಷೇತ್ರಗಳನ್ನಾಗಿ ವಿಂಗಡಿಸಿ ಅದರಲ್ಲಿ ಸಂಶೋಧನೆ, ವಿಕಾಸ, ಉದ್ಯೋಗ ಸೃಷ್ಟಿ, ಉದ್ಯೋಗಿಗಳಿಗೆ ಬೇಕಾದ ತಂತ್ರಜ್ಞಾನ ಮತ್ತು ಪ್ರೋತ್ಸಾಹ ಧನ ನೀಡುವ ಸರ್ವಾಂಗೀಣ ಅಭಿವೃದ್ಧಿಯ ಬಜೆಟ್ ಇದಾಗಿದೆ.
ಮಧ್ಯಮ ವರ್ಗದವರಿಗೂ ಆದಾಯ ತೆರಿಗೆಯಲ್ಲಿ 18,200 ರೂ. ವಾರ್ಷಿಕ ಉಳಿತಾಯವಾಗುವಂತೆ ಮಾಡಿ ಕೃಷಿ ವಲಯ, ಉದ್ಯಮ ವಲಯ ಸಹಿತ ನಗರ, ಹಳ್ಳಿ, ಉದ್ಯೋಗ, ಕೌಶಲ್ಯ ಎಲ್ಲವನ್ನೂ ಸ್ಪರ್ಶಿಸಿರುವ ಸರ್ವ ಸ್ಪರ್ಶಿ ಬಜೆಟ್ ಇದಾಗಿದೆ ಎಂದು ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ.