ನಿರಾಶಾದಾಯಕ ಬಜೆಟ್
Wednesday, July 24, 2024
ನಿರಾಶಾದಾಯಕ ಬಜೆಟ್
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಈ ಬಾರಿಯ ಕೇಂದ್ರ ಬಜೆಟ್ ನಿರಾಶಾದಾಯಕ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಪೂರ್ಣ ಬಹುಮತ ಪಡೆಯಲು ವಿಫಲವಾದ ಬಿಜೆಪಿ, ಹಲವಾರು ವಸ್ತುಗಳ ತೆರಿಗೆಯಲ್ಲಿ ರಿಯಾಯಿತಿ ಘೋಷಿಸಿ ಜನರನ್ನು ತೃಪ್ತಿಗೊಳಿಸುವ ಹೆಜ್ಜೆ ಇರಿಸಿದೆ.
ಮಿತ್ರ ಪಕ್ಷಗಳು ಅಧಿಕಾರದಲ್ಲಿರುವ ಬಿಹಾರ ಹಾಗೂ ಆಂಧ್ರಪ್ರದೇಶ ರಾಜ್ಯಗಳಿಗೆ ಭರಪೂರ ಕೊಡುಗೆ ನೀಡಿದೆ.
ಕರ್ನಾಟಕಕ್ಕೆ ಮಲತಾಯಿ ಧೋರಣೆಯಿಂದಾಗಿ ಮೇಕೆದಾಟು ಹಾಗೂ ಮಹದಾಯಿ ಯೋಜನೆ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
ಮಧ್ಯಮ ವರ್ಗಕ್ಕೆ ಪೂರಕ ಯೋಜನೆಗಳಿಲ್ಲದೆ ನಿರಾಶೆ ಹುಟ್ಟಿಸಿದೆ ಎಂದು ಅಶೋಕ್ ಕುಮಾರ್ ಕೊಡವೂರ್ ಪ್ರತಿಕ್ರಿಯಿಸಿದ್ದಾರೆ.