ಕಾಪು ಲೈಟ್ ಹೌಸ್ ಅಭಿವೃದ್ಧಿಗೆ ಆಗ್ರಹ
Wednesday, July 17, 2024
ಕಾಪು ಲೈಟ್ ಹೌಸ್ ಅಭಿವೃದ್ಧಿಗೆ ಆಗ್ರಹ
ಲೋಕಬಂಧುನ್ಯೂಸ್ ಡೆಸ್ಕ್, ಬೆಂಗಳೂರು
ಕಾಪು ವಿಧಾನಸಭಾ ಕ್ಷೇತ್ರದ ಕಾಪು ಲೈಟ್ ಹೌಸ್ ಬೀಚ್ ಅಭಿವೃದ್ಧಿಪಡಿಸಲು 2022- 23ರಲ್ಲಿ ಹಿಂದಿನ ಸರ್ಕಾರದಿಂದ 5 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಇದುವರೆಗೆ ಕಾಮಗಾರಿ ಆರಂಭಗೊಂಡಿಲ್ಲ. ಶೀಘ್ರ ಕಾಮಗಾರಿ ಅನುಷ್ಠಾನಗೊಳಿಸುಂತೆ ಹಾಗೂ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಪಡುಬಿದ್ರಿ ಬ್ಲೂ ಫ್ಲಾಗ್ ಬೀಚ್ ನ ಮೂಲಸೌಕರ್ಯ ಅಭಿವೃದ್ಧಿಪಡಿಸುವಂತೆ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಂಗಳವಾರ ಸದನದ ಗಮನ ಸೆಳೆದರು.
ಅದಕ್ಕೆ ಸ್ಪಂದಿಸಿದ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್, ಆದ್ಯತೆಯ ಮೇರೆಗೆ ಕಾಪು ಲೈಟ್ ಹೌಸ್ ಬೀಚ್ ಹಾಗೂ ಪಡುಬಿದ್ರಿ ಬ್ಲೂ ಫ್ಲಾಗ್ ಬೀಚ್ ಅಭಿವೃದ್ಧಿಪಡಿಸುವುದಾಗಿ ತಿಳಿಸಿದರು.